ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ದಾಳಿಗೊಳಗಾದ ದೇವಸ್ಥಾನದಲ್ಲಿಯೇ ಮೊದಲು ಮೊಳಗಿದ ಸುಪ್ರಭಾತ...!

ಹುಬ್ಬಳ್ಳಿ: ಮಸೀದಿಗಳಲ್ಲಿ ಅಜಾನ್ ನಿಲ್ಲಿಸುವಂತೆ ಹಿಂದೂ ಪರ ಸಂಘಟನೆಗಳು ಇಂದಿನಿಂದ ಭಜನೆ, ಸುಪ್ರಭಾತ ಹಾಗೂ ಹನುಮಾನ ಚಾಲೀಸಾ ಮೊಳಗಿಸುವುದಾಗಿ ಹೇಳಿದ್ದವು‌. ಅದರಂತೆ ಇಂದು ಹುಬ್ಬಳ್ಳಿಯ ವಿವಾದಿತ ದೇವಸ್ಥಾನದಲ್ಲಿಯೇ ಮೊದಲು ಸುಪ್ರಭಾತ ಮೊಳಗಿದೆ.

ಹೌದು..‌ಶ್ರೀರಾಮ ಸೇನೆ ಕಾರ್ಯಕರ್ತರು ಬೆಳಗ್ಗೆ 5 ಗಂಟೆಗೆ ಹಳೇ ಹುಬ್ಬಳ್ಳಿಯ ದಿಡ್ಡಿ ಹನುಮಂತ ದೇವಸ್ಥಾನದಲ್ಲಿ ಸುಪ್ರಭಾತ ಅಭಿಯಾನಕ್ಕೆ ಚಾಲನೆ ನೀಡಿದರು. ಶ್ರೀರಾಮಸೇನೆ, ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು ಮತ್ತು ಅರ್ಚಕರಿಂದ ಪೂಜೆ, ಹನುಮನ ಜಪಿಸುವ ಮಂತ್ರ ಮತ್ತು ಭಕ್ತಿಗೀತೆಗಳನ್ನು ಮೊಳಗಿಸಿದರು.

ಕಳೆದ ತಿಂಗಳು ಹುಬ್ಬಳ್ಳಿ ಗಲಭೆಯಲ್ಲಿ ಈ ದೇವಸ್ಥಾನದ ಮೇಲೆ ದಾಳಿಯಾಗಿತ್ತು. ದೇವಸ್ಥಾನಕ್ಕೆ ಪೋಲಿಸರು ಕಾವಲಿನಲ್ಲಿಯೇ ಈ ದೇವಸ್ಥಾನದಲ್ಲಿ ಮಂತ್ರಘೋಷಗಳು ಮೊಳಗಿವೆ.

Edited By :
Kshetra Samachara

Kshetra Samachara

09/05/2022 11:42 am

Cinque Terre

20.45 K

Cinque Terre

4

ಸಂಬಂಧಿತ ಸುದ್ದಿ