ಹುಬ್ಬಳ್ಳಿ:ಹೊಸ ವರ್ಷದ ಆಚರಣೆ ಅಂದ್ರೇ ಹುಬ್ಬಳ್ಳಿ ಜನರಿಗಂತೂ ಹಬ್ಬವೇ ಹಬ್ಬ. ಕೊರೋನಾ ಕರಿ ನೆರಳು ಬಂದಿದ್ದೆ ಬಂದಿದ್ದು, ಹುಬ್ಬಳ್ಳಿ ಜನರ ಜೋಶ್ ಗೆ ಮಾತ್ರ ಬ್ರೇಕ್ ಹಾಕಿದೆ. ಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುವಲ್ಲಿ ನಮ್ಮ ಹುಬ್ಬಳ್ಳಿ ಜನ ಎತ್ತಿದ ಕೈ ಹಾಗಿದ್ದರೆರ ನಮ್ಮ ಹುಬ್ಬಳ್ಳಿ ಜನ ಹೇಗೆ ಹೊಸ ವರ್ಷವನ್ನು ಆಚರಿಸಿದ್ದಾರೆ ಎಂಬುವಂತ ಮೆಮೊರಿಯಲ್ ಝಲಕ್ ನೋಡಿಕೊಂಡು ಬರೋಣ ಬನ್ನಿ...
ವಾಣಿಜ್ಯನಗರಿ ಹುಬ್ಬಳ್ಳಿಯ ಖಾಸಗಿ ಹೋಟೆಲೆಗಳಲ್ಲಿ ಹೊಸ ವರ್ಷ ಆಚರಣೆ ಸಂಭ್ರಮವಂತೂ ಮನೆ ಮಾಡಿರುತ್ತಿತ್ತು. ಆದರೇ ಈ ವರ್ಷ ಓಮೈಕ್ರಾನ್ ವೈರಸ್ ಭೀತಿಯಿಂದ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದ್ದು, ಯಾರಾದರೂ ಉಲ್ಲಂಘನೆ ಮಾಡಿದರೇ ಅವರ ವಿರುದ್ಧ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದು, ಎಂದಿನಂತೆ ರಾತ್ರಿ 10 ಗಂಟೆಗೆ ಎಲ್ಲವೂ ಕ್ಲೋಸ್ ಆಗಬೇಕು. ಡಿಜೆ, ಸಾಮೂಹಿಕ ಪಾರ್ಟಿ ನಡೆಸುವಂತಿಲ್ಲ ಎಂದು ಸೂಚನೆ ನೀಡಲಾಗಿದೆ.
ಇನ್ನೂ ಹು-ಧಾ ಮಹಾನಗರದಲ್ಲಿ ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಹು-ಧಾ ಪೊಲೀಸ್ ಆಯುಕ್ತ ಲಾಬೂರಾಮ್ ಅವರ ನಿರ್ದೇಶನದಲ್ಲಿ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದ್ದು, ಸಾಮೂಹಿಕ ಆಚರಣೆ ಮಾಡದಂತೆ ಈಗಾಗಲೇ ಸೂಚನೆ ನೀಡಲಾಗಿದೆ.ಸರ್ಕಾರದ ಮಾರ್ಗಸೂಚಿಗಳನ್ನ ಪಾಲನೆ ಮಾಡಲು ಹೊಟೇಲ್ ಮಾಲೀಕರಿಗೆ ಸೂಚನೆ ನೀಡಲಾಗಿದೆ.ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆ ಮಾಡದಂತೆ ಸೂಚನೆ ನೀಡಲಾಗಿದ್ದು,ನಿಯಮ ಉಲ್ಲಂಘಿಸಿದವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಹು-ಧಾ ಮಹಾನಗರ ಪೊಲೀಸ್ ಕಮೀಷನರ್ ಲಾಭುರಾಮ್ ಅವರು ಪಬ್ಲಿಕ್ ನೆಕ್ಸ್ಟ್ ಗೆ ಮಾಹಿತಿ ನೀಡಿದ್ದಾರೆ.
ಇನ್ನೂ ಧಾರವಾಡ ಜಿಲ್ಲೆಯಲ್ಲಿ ಯಾವುದೇ ಸಂಭ್ರಮಾಚರಣೆ ಇಲ್ಲದಂತಾಗಿದ್ದು, ಕೋವಿಡ್ ನಿಯಮ ಚಾಚೂ ತಪ್ಪದೇ ಪಾಲನೆ ಮಾಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ಬಾರಿ ಸಂಭ್ರಮವಿಲ್ಲದ ಹೊಸ ವಷಾಚರಣೆ ಮಾಡುವಂತಾಗಿದ್ದು, ಎಂದಿನಂತೆ ರಾತ್ರಿ 10ರ ವರೆಗೆ ಮಾತ್ರ ತಾರಾ ಹೋಟೆಲ್ ಗಳು ಓಪನ್ ಇರಲಿದ್ದು, ಸಾಮೂಹಿಕ ಕುಣಿತ, ಕುಡಿತಕ್ಕೆ ಬ್ರೇಕ್ ಹಾಕಲಾಗಿದೆ.
Kshetra Samachara
30/12/2021 07:46 pm