ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಕಾನೂನು ತಿಳುವಳಿಕೆ ಅಗತ್ಯ:ಪ್ರೊ.ಪಿ.ಈಶ್ವರ ಭಟ್

ಹುಬ್ಬಳ್ಳಿ: ಭಾರತದಲ್ಲಿ ಪುರುಷ ಪ್ರಧಾನ ಮೌಲ್ಯಗಳಿಂದ ಕಾನೂನು ಪರಿಣಾಮಕಾರಿಯಾಗಿ ಕಾರ್ಯಗತವಾಗಲಾರದು, ಕಾನೂನಿಗೆ ದೊಡ್ದ ಸಾಮಾಜಿಕ ಆಯಾಮವಿದೆ. ಮಹಿಳೆಯರ ಮೇಲೆ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿದ್ದು, ಅವುಗಳನ್ನು ತೊಡೆದು ಹಾಕಲು ಮಹಿಳೆಯರಿಗೆ ಮತ್ತು ಸಮುದಾಯಕ್ಕೆ ಕಾನೂನು ತಿಳಿವಳಿಕೆ ನೀಡುವುದು ಅಗತ್ಯ ಎಂದು ಕಾನೂನು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಪಿ. ಈಶ್ವರ ಭಟ್ ಹೇಳಿದರು.

ನಗರದ ಸುತಗಟ್ಟಿಯ ಡಾನ್ ಬಾಸ್ಕೋ ಅಕಾಡೆಮಿಯಲ್ಲಿ ನಡೆದ ಪೂರಕ ಕಾನೂನು ತರಬೇತಿ ಉದ್ಘಾಟಿಸಿ ಮಾತನಾಡಿದರು.

ಪೂರಕ ಕಾನೂನು ಸುಗಮಕಾರರು ಕಾನೂನಿನ ವಿಧಾನ ಮತ್ತು ಸೌಲಭ್ಯಗಳ ಸರಿಯಾದ ಮಾಹಿತಿಯನ್ನು ನೀಡಿದರೆ ದೌರ್ಜನ್ಯಗಳನ್ನು, ಅಸಮಾನತೆಯನ್ನು ನಿಲ್ಲಿಸಲು ಸಾಧ್ಯವಿದೆ. ಎಲ್ಲಾ ಜಿಲ್ಲೆಗಳಲ್ಲಿ ಕಾನೂನು ವಿದ್ಯಾಲಯ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಮ್ಮ ವಿಶ್ವವಿದ್ಯಾನಿಲಯದಲ್ಲಿ ತಕ್ಷಣ ಸರ್ಟಿಫಿಕೆಟ್ ಕೋರ್ಸನ್ನು ಪ್ರಾರಂಭಿಸಲಾಗುವುದು. ಇದು ಆರು ತಿಂಗಳ ಕೋರ್ಸ್ ಆಗಲಿದ್ದು, ಪಿಯುಸಿ ಆದವರು ಮತ್ತು ಪೂರಕ ಕಾನೂನು ಸುಗಮಕಾರರು ಈ ಕೋರ್ಸ್ಗೆ ಸೇರಬಹುದು ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಚಿನ್ನಣ್ಣವರ ಆರ್ ಎಸ್ ಮುಖ್ಯ ಅತಿಥಿಯಾಗಿ ಮಾತನಾಡಿ, ಬದುಕಿಗೆ ಅಗತ್ಯವಾದವುಗಳು ಹೇಗೆ ಬೇಕೋ ಹಾಗೆ ಅಗತ್ಯ ಕಾನೂನುಗಳ ತಿಳಿವಳಿಕೆಯು ಕೂಡಾ ಅಗತ್ಯವಿದೆ. ಸಾಮಾನ್ಯ ಮಹಿಳೆಯರಿಗೆ, ನೊಂದ ಮಹಿಳೆಯರಿಗೆ ಅವರ ಶಕ್ತಿಯನ್ನು ತಿಳಿಸಿಕೊಡಬೇಕು. ಪ್ರಾಧಿಕಾರವು ಉಚಿತ ವಕೀಲರನ್ನು ಒದಗಿಸುವ ಕೆಲಸವನ್ನು ಮಾಡುತ್ತಿದೆ ಎಂದರು.

ಡೀಡ್ಸ್ ನಿರ್ದೇಶಕಿ ಮರ್ಲಿನ್ ಮಾರ್ಟಿಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆಯರ ಮೇಲಿನ ಹಿಂಸೆಯನ್ನು ಕಡಿಮೆ ಮಾಡಲು, ಅಸಮಾನತೆಯ ಸಮಾಜವನ್ನು ಬದಲಾಯಿಸಲು ಪ್ರತೀ ವ್ಯಕ್ತಿ ಕೆಲಸ ಮಾಡಬೇಕಿದೆ. ಪೂರಕ ಕಾನೂನು ತರಬೇತಿ ಈ ನಿಟ್ಟಿನಲ್ಲಿ ಒಂದು ಪ್ರಯತ್ನವಾಗಿದೆ. ತಳ ಮಟ್ಟದ ಮಹಿಳೆಯರ ಮನೆ ಬಾಗಿಲಿಗೆ ನಾವೆಲ್ಲಾ ಕಾನೂನು ಮಾಹಿತಿಯನ್ನು ಕೊಂಡೊಯ್ಯಬೇಕಾಗಿದೆ. ಇಲಾಖೆ, ಸಂಘ ಸಂಸ್ಥೆಗಳು, ಪೂರಕ ಕಾನೂನು ಸುಗಮಕಾರರ ಪ್ರೋತ್ಸಾಹ, ಸಹಕಾರ ಅಗತ್ಯವಿದೆ ಎಂದು ಹೇಳಿದರು.

Edited By : Nagaraj Tulugeri
Kshetra Samachara

Kshetra Samachara

22/01/2021 05:33 pm

Cinque Terre

32.56 K

Cinque Terre

0

ಸಂಬಂಧಿತ ಸುದ್ದಿ