ನವಲಗುಂದ : ಕರ್ಫ್ಯೂ ಅನ್ನೋ ಹೆಸರು ಕೇಳಿದ್ರೆ ಸಾಕು ದಿನಗೂಲಿ ನೌಕರರಿಂದ ಹಿಡಿದು ಬೀದಿ ಬದಿ ವ್ಯಾಪಾರಸ್ಥರು ಸೇರಿದಂತೆ ಎಲ್ಲಾ ವ್ಯಾಪಾರಸ್ತರಿಗೆ ಮತ್ತು ಜನ ಸಾಮಾನ್ಯರಿಗೆ ನುಂಗಲಾರದ ತುಂತ್ತಾಗಿದೆ.
ಇದಕ್ಕೆ ನವಲಗುಂದ ಪಟ್ಟಣದ ಜನರೇನು ಹೊರತಲ್ಲಾ, ದಿನನಿತ್ಯ ದುಡಿದು ತಿನ್ನುವ ನಮಗೆ ಜನರು ಹೊರ ಬರದೇ ಇದ್ರೆ ವ್ಯಾಪಾರ ನಡೆಯೋದಾದ್ರೂ ಹೇಗೆ..?. ಸಾಲ ಸೂಲ ಕಟ್ಟಬೇಕಾದ ಅನಿವಾರ್ಯತೆಯ ಸುಳಿಯಲ್ಲಿ ನಾವು ಸಿಲುಕ್ಕಿದ್ದೇವೆ. ಸರ್ಕಾರ ವೀಕೆಂಡ್ ಕರ್ಫ್ಯೂ ಹಾಕಿ ಗೋಡೆ ಮೇಲೆ ದೀಪ ಇಟ್ಟಂತೆ ಮಾಡಿದೆ ಎಂದು ಜನರು ತಮ್ಮ ಅಲಳನ್ನು ತೋಡಿಕೊಂಡಿದ್ದಾರೆ.
Kshetra Samachara
16/01/2022 05:13 pm