ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಎರಡನೇ ವಾರದ ಎರಡನೇ ದಿನದ ಕರ್ಫ್ಯೂ ಸಂಪೂರ್ಣ ವಿಫಲ

ಅಣ್ಣಿಗೇರಿ; ರಾಜ್ಯ ಸೇರಿದಂತೆ ಜಿಲ್ಲೆಯಾದ್ಯಂತ ಏರಿಕೆಯಾಗುತ್ತಿರುವ ಕೊರೋನಾದ ಮೂರನೆಯ ಅಲೆ ಹತ್ತಿಕ್ಕುವ ನಿಟ್ಟಿನಲ್ಲ ರಾಜ್ಯ ಸರ್ಕಾರ ಈಗಾಗಲೇ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ್ದು,ಈ ಹಿನ್ನೆಲೆ ಅಣ್ಣಿಗೇರಿ ಪಟ್ಟಣದಲ್ಲಿ ಎರಡನೆ ದಿನದ ಕರ್ಫ್ಯೂ ಸಂಪೂರ್ಣ ವಿಫಲವಾಗಿದೆ.

ಕೆಲ ಸಾರ್ವಜನಿಕರು ತಮ್ಮ ಮನಸೋ ಇಚ್ಛೆ ಪಟ್ಟಣದಲ್ಲಿ ತಿರುಗಾಡುತ್ತಿದ್ದು, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಾರ್ವಜನಿಕರನ್ನು ಪ್ರಶ್ನೆ ಮಾಡುತ್ತಿಲ್ಲ,ಪೊಲೀಸರು ಪಟ್ಟಣದ ತುಂಬಾ ಸಂಚರಿಸುತ್ತಿದ್ದರೆ ಜನರು ಮನೆಯಲ್ಲಿ ಇರುತ್ತಾರೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ.ಒಟ್ಟಾರೆಯಾಗಿ ಪಟ್ಟಣದಲ್ಲಿ ಎರಡನೇ ವಾರದ ಎರಡನೇ ದಿನದ ಕರ್ಫ್ಯೂ ಸಂಪೂರ್ಣ ವಿಪಲವಾಗಿದೆ ಎಂದೇ ಹೇಳಬಹುದು.

Edited By : Shivu K
Kshetra Samachara

Kshetra Samachara

16/01/2022 04:02 pm

Cinque Terre

35.68 K

Cinque Terre

0

ಸಂಬಂಧಿತ ಸುದ್ದಿ