ಹುಬ್ಬಳ್ಳಿ: ವೀಕೆಂಡ್ ಕರ್ಫ್ಯೂ ಎರಡನೇ ದಿನವೂ ವಾಣಿಜ್ಯ ನಗರಿ ಹುಬ್ಬಳ್ಳಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳಗ್ಗೆಯಿಂದಲೇ ಪೊಲೀಸರಿಂದ ಚೆನ್ನಮ್ಮ ವೃತ್ತದಲ್ಲಿ ಪೊಲೀಸರಿಂದ ವಾಹನ ತಪಾಸಣೆ ಆರಂಭವಾಗಿದೆ. ಅಲ್ಲಲ್ಲಿ ಬ್ಯಾರಿಕೇಡ್ ಹಾಕಿ ವಾಹನ ತಪಾಸಣೆ ನಡೆಸಲಾಗುತ್ತಿದೆ. ಆದ್ರೆ ಕರ್ಫ್ಯೂ ಹಿನ್ನೆಲೆಯಲ್ಲಿ ಜನರ ಓಡಾಟ ಕಡಿಮೆಯಾಗಿದೆ. ನಿನ್ನೆ ಕೊಂಚ ಓಡಾಟ ಜಾಸ್ತಿ ಇತ್ತು
ಪೊಲೀಸರು ಕೂಡ.
ವಿನಾಕಾರಣ ಮನೆಯಿಂದ ಆಚೆ ಬರಬಾರದೆಂದು ಜನರಿಗೆಎಚ್ಚರಿಕೆ ನೀಡಿ ಕಳುಹಿಸಿದ್ದರು. ಆದ್ರೆ ಇಂದು ಭಾನುವಾರವಾಗಿರುವದರ ಜೊತೆಗೆ ಜನರ ಓಡಾಟ ಕಡಿಮೆಯಾಗಿದೆ.
ನಗರದ ಪ್ರಮುಖ ಮಾರ್ಕೆಟ್ ಕಂಪ್ಲೀಟ್ ಬಂದ್ ಆಗಿವೆ. ದುರ್ಗದ ಬೈಲ್, ಜನತಾ ಬಜಾರ್ ಸೇರಿದಂತೆ ವಿವಿಧ ಮಾರ್ಕೆಟ್ ಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು, ಮಾರ್ಕೆಟ್ ಸೇರಿದಂತೆ ಜನನಿಬಿಡ ಪ್ರದೇಶದಲ್ಲಿ ಪೊಲೀಸರು ಗಸ್ತು ತಿರುಗುವದರಿಂದ ಜನರ ಸಂಚಾರಕ್ಕೆ ಬ್ರೇಕ್ ಬಿದಿದೆ.
ಬಸ್ ಸಂಚಾರ ನಿನ್ನೆಯಂತೆ ಶುರುವಾದರೂ ವಿರಳವಾಗಿವೆ. ಪ್ರಯಾಣಿಕರ ಸಂಖ್ಯೆಗನುಗುಣವಾಗಿ ಬಸ್ ಸಂಚರಿಸುತ್ತಿವೆ. ಆದ್ರೂ ನಗರ ಸಾರಿಗೆ ಹಾಗೂ ಅಂತರ ಜಿಲ್ಲಾ ಸಾರಿಗೆ ಬಸ್ ಸಂಚರಿಸುತ್ತಿದ್ದು, ಪ್ರಯಾಣಿಕರ ಅವಶ್ಯಕತೆಗೆ ತಕ್ಕಂತೆ ಸಂಚರಿಸುತ್ತಿವೆ.
Kshetra Samachara
09/01/2022 11:49 am