ಧಾರವಾಡ: ಕರ್ನಾಟಕ ಉಚ್ಛ ನ್ಯಾಯಾಲಯ ಪೀಠ, ಧಾರವಾಡದಲ್ಲಿ ಇಂದು “ಮೆಗಾ ಲೋಕ ಅದಾಲತ, ಇ-ಲೋಕ ಅದಾಲತ ನ್ನು” ಕರ್ನಾಟಕ ಉಚ್ಛ ನ್ಯಾಯಾಲಯ ಧಾರವಾಡ ಪೀಠದ ಹಿರಿಯ ನ್ಯಾಯಮೂರ್ತಿಗಳಾದ ಜಿ. ನರೇಂದರ್ ಮಾರ್ಗದರ್ಶನದಲ್ಲಿ ಏರ್ಪಡಿಸಲಾಗಿತ್ತು.
ಈ ಅದಾಲತ್‍ನಲ್ಲಿ ನ್ಯಾಯಮೂರ್ತಿಗಳಾದ ಅಶೋಕ ಎಸ್. ಕಿಣಗಿ, ಪ್ರದೀಪಸಿಂಗ ಯೆರೂರ, ಎಮ್.ಐ.ಅರುಣ, ರವಿ ವಿ. ಹೊಸಮನಿ, ವಿ. ಶ್ರೀಶಾನಂದ ಹಾಗೂ ಇವರೊಂದಿಗೆ ಲೋಕ ಅದಾಲತ್‍ನ ಸದಸ್ಯರಾದ ಎಲ್.ಟಿ. ಮಂಟಗಣಿ, ಎಮ್.ಟಿ. ಬಂಗಿ, ಎಮ್.ಎಮ್. ಕನ್ನೂರ, ಜೆ.ಎಸ್. ಶೆಟ್ಟಿ, ಮತ್ತು ಎಸ್.ಎಸ್. ಬಡವಡಗಿ ಸೇರಿದಂತೆ ಒಟ್ಟು 5 ಪೀಠಗಳನ್ನು ಆಯೋಜಿಸಲಾಗಿತ್ತು. ಸದರಿ ಅದಾಲತ್‍ನಲ್ಲಿ ಒಟ್ಟು 935 ಪ್ರಕರಣಗಳನ್ನು ವಿಚಾರಣೆಗೆಂದು ಗುರುತಿಸಿಕೊಳ್ಳಲಾಗಿತ್ತು. ಆ ಪೈಕಿ ಒಟ್ಟು 342 ಪ್ರಕರಣಗಳನ್ನು 6,18,42,902 ಮೊತ್ತಕ್ಕೆ ಇತ್ಯರ್ಥಪಡಿಸಲಾಯಿತು ಎಂದು ಕರ್ನಾಟಕ ಉಚ್ಛ ನ್ಯಾಯಾಲಯ ಧಾರವಾಡ ಪೀಠದ ಅಧೀಕ್ಷಕ ವಿಲೇಖನಾಧಿಕಾರಿ ಮತ್ತು ಉಚ್ಛ ನ್ಯಾಯಾಲಯದ ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿಗಳಾದ ರೋಣ ವಾಸುದೇವ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
19/12/2020 06:55 pm