ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗ್ರಾಪಂ ಚುನಾವಣೆ: ಬಂದೋಬಸ್ತ್ ಗಾಗಿ 725 ಅಧಿಕಾರಿ, ಸಿಬ್ಬಂದಿ ನೇಮಕ: ಎಸ್ಪಿ ಕೃಷ್ಣಕಾಂತ

ಧಾರವಾಡ: ಬರುವ ಡಿಸೆಂಬರ್ 22 ರಂದು ಮೊದಲ ಹಂತದಲ್ಲಿ ಜಿಲ್ಲೆಯ ಧಾರವಾಡ, ಅಳ್ನಾವರ ಮತ್ತು ಕಲಘಟಗಿ ತಾಲೂಕುಗಳ ವಿವಿಧ ಗ್ರಾಮ ಪಂಚಾಯತಿಗಳ ಚುನಾವಣೆ ನಡೆಯುವ ಹಿನ್ನಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಮತ್ತು ಚುನಾಣೆಗಳು ಮುಕ್ತ, ನ್ಯಾಯ ಸಮ್ಮತ, ನಿಷ್ಪಕ್ಷಪಾತವಾಗಿ ನಡೆಯಲು ಅನುಕೂಲವಾಗುವಂತೆ ಅಧಿಕಾರಿ, ಪೊಲೀಸ್ ಪೇದೆಗಳು ಸೇರಿದಂತೆ ಒಟ್ಟು 725 ಸಿಬ್ಬಂದಿಯನ್ನು ಕರ್ತವ್ಯಕ್ಕೆ ನೇಮಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಮತದಾನ ನಡೆಯುವ ಸಾಮಾನ್ಯ, ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳ ಅನುಸಾರ ಅಗತ್ಯವಿರುವ ಸಿಬ್ಬಂದಿಗಳನ್ನು ನೇಮಿಸಲಾಗಿದೆ.

ಧಾರವಾಡ, ಕಲಘಟಗಿ, ಅಳ್ನಾವರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕರ್ತವ್ಯ ನಿರ್ವಹಿಸಲು 4 ಜನ ಡಿವೈಎಸ್ ಪಿ, 10 ಜನ ಸಿಪಿಐ, 17 ಜನ ಪಿಎಸ್ಐ, 49 ಜನ ಎಎಸ್ಐ, 318 ಹೆಡ್ ಕಾನಸ್ಟೆಬಲ್, ಕಾಸ್ ಸ್ಟೇಬಲಗಳು, 132 ಹೋಮ್ ಗಾರ್ಡ್ಸ್ ಮತ್ತು 195 ಜನ ಜೈಲ್ ವಾರ್ಡ್‌ನ್ ಗಳನ್ನು ನೇಮಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

18/12/2020 01:46 pm

Cinque Terre

34.25 K

Cinque Terre

0

ಸಂಬಂಧಿತ ಸುದ್ದಿ