ಧಾರವಾಡ: ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಜಾಮೀನು ಅರ್ಜಿಯನ್ನು ಧಾರವಾಡದ ಸಿಬಿಐ ವಿಶೇಷ ನ್ಯಾಯಾಲಯ ಇಂದು ತಿರಸ್ಕರಿಸಿದೆ.
ಈ ಸಂಬಂಧ ಯೋಗೀಶಗೌಡ ಅಣ್ಣ ಗುರುನಾಥಗೌಡ ಪ್ರತಿಕ್ರಿಯೆ ನೀಡಿದ್ದು, ವಿನಯ್ ಅವರ ಜಾಮೀನು ಅರ್ಜಿ ತಿರಸ್ಕಾರಗೊಂಡಿದ್ದಕ್ಕೆ ಖುಷಿಯಾಗಿದೆ. ಈ ಹಿಂದೆ ವಿನಯ್ ಅವರು ಸಾಕಷ್ಟು ಜನರನ್ನು ಜೈಲಿಗೆ ಹಾಕಿಸಿದ್ದಾರೆ. ಈಗ ಅವರೇ ಜೈಲಿನಲ್ಲಿದ್ದಾರೆ ಎಂದಿದ್ದಾರೆ.
ವಿನಯ ಕುಲಕರ್ಣಿ ಯಾರನ್ನೂ ಬೆಳೆಯಲು ಬಿಡುವುದಿಲ್ಲ. ಬಸವರಾಜ ಮುತ್ತಗಿ ಅವರನ್ನು ಕೊಲೆ ಮಾಡಿ ಆ ಆರೋಪವನ್ನು ನನ್ನ ತಲೆಗೆ ಕಟ್ಟುವ ಹುನ್ನಾರ ನನಗೂ ಗೊತ್ತಾಗಿತ್ತು. ವಿನಯ್ ಅವರನ್ನು ಯಾರೇ ನಂಬಿದರೂ ಅವರಿಗೆ ಇದೇ ರೀತಿ ಆಗಿದೆ ಎಂದರು.
Kshetra Samachara
14/12/2020 05:47 pm