ಹುಬ್ಬಳ್ಳಿ: ವಕೀಲ ವಿನೋದ ಪಾಟೀಲ ಹಾಗೂ ಪೊಲೀಸರ ಜಟಾಪಟಿ ವಿಚಾರವಾಗಿ ಇನ್ಸ್‌ಪೆಕ್ಟರ್ ಪ್ರಭು ಸೂರಿನ್ ಹಾಗೂ ಓರ್ವ ಸಿಬ್ಬಂದಿಯನ್ನು ವರ್ಗಾವಣೆ ಮಾಡಿ ಐಜಿಪಿ ರಾಘವೇಂದ್ರ ಸುಹಾನ ಆದೇಶ ಹೊರಡಿಸಿದ್ದಾರೆ.
ನವನಗರದಲ್ಲಿ ಬುಧವಾರ ಜಗಳವಾಡುತ್ತಿದ್ದ ವಕೀಲ ಹಾಗೂ ಸ್ನೇಹಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಈ ವಿಚಾರವಾಗಿ ಧಾರವಾಡ ವಕೀಲರ ಸಂಘ ಪ್ರತಿಭಟನೆ ನಡೆಸಿ ಇನ್ಸ್‌ಪೆಕ್ಟರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿತ್ತು.
ಅಲ್ಲದೇ ಕ್ರಮಕ್ಕೆ ಸೋಮವಾರದ ಗಡವು ನೀಡಿತ್ತು. ಆ ಬೆನ್ನಲ್ಲೇ ಐಜಿಪಿ ವರ್ಗಾವಣೆ ಮಾಡಿ ಆದೇಶ ನೀಡಿದ್ದಾರೆ.
Kshetra Samachara
30/11/2020 11:17 am