ವರದಿ : ಈರಣ್ಣ ವಾಲಿಕಾರ
ಹುಬ್ಬಳ್ಳಿ- ವಾಣಿಜ್ಯ ನಗರಿ ಹುಬ್ಬಳ್ಳಿ ಜನರ ಗೊಳು ಹೇಳ ತಿರದಾಗಿದೆ, ಕೊರನಾ ನಡುವೆಯೂ ದೀಪಾವಳಿ ಆಚರಣೆ ಮಾಡುತ್ತಿರುವ ಸಾರ್ವಜನಿಕರಿಗೆ ಬೈಕ್ ಪಾರ್ಕ್ ಮಾಡುವುದೇ ಒಂದು ದೊಡ್ಡ ಸಾಹಸವಾಗಿದೆ..
ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ, ಕೊರೊನಾ ಭಯ ಬಿಟ್ಟು ಜನರು ಮಾರ್ಕೆಟ್ ಮಾಡಲು ಬಂದರೆ, ಬೈಕ್ ಗಳನ್ನು ಪಾರ್ಕ್ ಮಾಡಲು ಜಾಗ ನೋಡಿದರೆ. ಎಲ್ಲಿ ನೋಡಿದರು ತಗ್ಗು ಗುಂಡಿಗಳ ದುರಸ್ತಿ ಕಾಮಗಾರಿಗಳು ನಡೆಯುತ್ತಿವೆ. ಅದ್ದರಿಂದ ಅಲ್ಲೇ ಪಾರ್ಕ್ ಮಾಡಿ ಹೋಗಿ ಬರುವುದರೊಳಗೆ,ಟ್ರಾಪಿಕ್ ಪೋಲಿಸ್ ಸಿಬ್ಬಂದಿ ಬೈಕ್ ಎತ್ತಿಕೊಂಡು ಹೋಗುತ್ತಿರುವುದು ಸಾಮಾನ್ಯವಾಗಿದೆ. ಇದರಿಂದಾಗಿ ಬೈಕ್ ಸವಾರರಿಗೆ ಬೈಕ್ ಪಾರ್ಕ್ ಮಾಡುವುದೇ ದೊಡ್ಡ ತಲೆನೋವು ಆಗಿದೆ.
ಇನ್ನೂ ನಗರದಲ್ಲಿ ದುರಸ್ತಿ ಕಾಮಗಾರಿ ಮಾಡುತ್ತಿರುವು ಹಿನ್ನೆಲೆಯಲ್ಲಿ, ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿರುವ ವಾಹನಗಳನ್ನು ಪೊಲೀಸರು ಎತ್ತುಕೊಂಡು ಹೋಗುವ ಮೊದಲು ಯಾವುದೇ ಘೋಷಣೆ ಹೇಳದೆ. ವಾಹನಗಳನ್ನು ಎತ್ತುಕೊಂಡು ಹೋಗುತ್ತಿರುವ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಒಟ್ಟಿನಲ್ಲಿ ಆರ್ಥಿಕ ಬಿಕ್ಕಟ್ಟಿನ ನಡುವೆ, ದೀಪಾವಳಿ ಸಂಭ್ರಮದಲ್ಲಿರುವ ಜನತೆಗೆ, ಸಂಬಂಧಪಟ್ಟ ಅಧಿಕಾರಿಗಳು ಪರ್ಯಾಯ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸಿಬೇಕಾಗಿದೆ.......!
Kshetra Samachara
10/11/2020 04:55 pm