ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿದ್ಯುತ್ ಖಾಸಗೀಕರಣ ವಿರುದ್ಧ : ಪ್ರತಿಭಟನೆ

ನವಲಗುಂದ : ಕೇಂದ್ರ ಸರ್ಕಾರದ ಸನ್ 2020ನೇ ಉದ್ದೇಶಿತ ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣ ಮಾಡುತ್ತಿರುವದನ್ನು ಖಂಡಿಸಿ ಸ್ಥಳೀಯ ಹೆಸ್ಕಾಂ ಕಛೇರಿ ಆವರಣದಲ್ಲಿ ಕಪ್ಪು ಬಟ್ಟೆ ಧರಿಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಭಾಗ ಅಧಿಕಾರಿ ಎಮ್. ಎಮ್. ಆಡಿನ ಮಾತನಾಡಿ ಕೇಂದ್ರ ಸರಕಾರ ಕಾರ್ಮಿಕ ವರ್ಗದ ಮರಣ ಶಾಸನವಾಗಿದೆ. ಖಾಸಗಿಕರಣದಿಂದ ರೈತರಿಗೂ, ಬಳಕೆದಾರರಿಗೆ ಹಾಗೂ ಕಾರ್ಮಿಕರಿಗೂ ಅಪಾಯ ತಂದಿದೆ. ವಿದ್ಯುತ್ ಬಿಲ್ ದುಬಾರಿಯಾಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಿ. ವಾಯ್. ಭಾವಿಕಟ್ಟಿ, ಎಸ್. ಆರ್. ಡೊಳ್ಳಿನ, ಎಮ್. ಎಸ್. ಮರಿಗೌಡ್ರ, ಎನ್. ಜೆ. ದೇವರೆಡ್ಡಿ, ಪೂಜಾ ಹಿರೇಮಠ, ವಿ. ಆಯ್.ಆನಂದಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

05/10/2020 04:00 pm

Cinque Terre

10.44 K

Cinque Terre

2

ಸಂಬಂಧಿತ ಸುದ್ದಿ