ಹುಬ್ಬಳ್ಳಿ: ಯುವಕನೊಬ್ಬ ಹೆಲ್ಮೆಟ್ ಹಾಕದೆ ಅತಿ ವೇಗವಾಗಿ ಬೈಕ್ ಚಾಲನೆ ಮಾಡುತ್ತಿದ್ದಾಗ ಬೈಕ್ ನಿಯಂತ್ರಣಕ್ಕೆ ಬಾರದೆ ರಸ್ತೆ ಬದಿಯ ಸೇತುವೆಗೆ ಢಿಕ್ಕಿ ಹೊಡೆದಿದ್ದಾನೆ. ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ.
ಹುಬ್ಬಳ್ಳಿಯ ಉಣಕಲ್ ನಿವಾಸಿಯಾದ ಪವನ ಕಮ್ಮಾರ ಎಂಬ ಯುವಕ ವಿದ್ಯಾನಗರದಲ್ಲಿನ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ. ಕಳೆದ ಮೂರು ದಿನಗಳ ಹಿಂದೆ ಮನೆಯಿಂದ ಕಾಲೇಜಿಗೆ ಬೈಕ್ ಮೇಲೆ ಹೆಲ್ಮೆಟ್ ಇಲ್ಲದೆ ಅತಿ ವೇಗವಾಗಿ ಬರುತ್ತಿದ್ದ. ಈ ವೇಳೆ ಉಣಕಲ್ ಕ್ರಾಸ್ ಬಳಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಬಿಆರ್‌ಟಿಎಸ್ ಸೇರುವೆಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಪವನ ತಲೆಗೆ ಗಂಭೀರ ಗಾಯವಾಗಿತ್ತು.
ಕೂಡಲೇ ಸ್ಥಳೀಯರ ಸಹಾಯದಿಂದ ಗಾಯಗೊಂಡ ಪವನ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ತಲೆಗೆ ಬಲವಾದ ಏಟು ಬಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಪವನ ಕಮ್ಮಾರ ಮೃತಪಟ್ಟಿದ್ದಾನೆ. ಸದ್ಯ ಈ ಎಲ್ಲ ದೃಶ್ಯಗಳು ಅಪಘಾತ ನಡೆದ ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹುಬ್ಬಳ್ಳಿ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ವಿಡಿಯೋ ನೋಡಿದ ಮೇಲಾದರೂ ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸುವ ಸವಾರರು, ತಮಗಲ್ಲದಿದ್ದರು ತಮ್ಮ ಕುಟುಂಬದವರಿಗಾಗಿ ಹೆಲ್ಮೆಟ್ ಧರಿಸಲು ಮುಂದಾಗಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/10/2022 04:04 pm