ನವಲಗುಂದ: ನವಲಗುಂದ ಪಟ್ಟಣದ ಹೊರವಲಯದ ಗೊಬ್ಬರಗುಂಪಿ ಕ್ರಾಸ್ ಬಳಿ ಎರಡು ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿದ್ದು, ಓರ್ವ ವ್ಯಕ್ತಿ ಮೃತಪಟ್ಟಿದ್ದು, ನಾಲ್ವರನ್ನು ಪ್ರಥಮ ಚಿಕಿತ್ಸೆಗಾಗಿ ನವಲಗುಂದ ತಾಲೂಕ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಮೃತ ದುರ್ದೈವಿಯನ್ನು ಬಾಗಲಕೋಟೆ ಮೂಲದ ಅನಿಲ ಚೌಹಾನ್ ಎಂದು ಗುರುತಿಸಲಾಗಿದ್ದು, ಆತನೊಂದಿಗಿದ್ದ ಮತ್ತೋರ್ವನನ್ನು ಪ್ರಭು ನಾಯಕ ಎನ್ನಲಾಗುತ್ತಿದೆ. ಇವರು ಹುಬ್ಬಳ್ಳಿಯಿಂದ ಬಾಗಲಕೋಟೆಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ತಾಲೂಕಿನ ಗೊಬ್ಬರಗುಂಪಿ ಗ್ರಾಮದ ದ್ಯಾಮಪ್ಪ ಹಣಮಂತಪ್ಪ ಓಲೇಕಾರ, ರಮೇಶ್ ಹುಬ್ಬಳ್ಳಿ, ಹಾಲಪ್ಪ ಪೂಜಾರ ಸೇರಿದಂತೆ ಒಟ್ಟು ನಾಲ್ಕು ಜನರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗುತ್ತಿದ್ದು, ಘಟನೆ ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸ್ಥಳಕ್ಕೆ ಪಿಎಸ್ಐ ಕಲ್ಮೇಶ್ ಬೆನ್ನೂರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Kshetra Samachara
23/05/2022 06:19 pm