ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ರೊಕ್ಕಾ ತಗೋರಿ ಪೊಲೀಸ್ರ: ಆದ್ರ ಜೀವ ವಾಪಸ್ ಕೊಡ್ರಿ

ಕುಂದಗೋಳ: ತಾಲೂಕಿನ ಪಶುಪತಿಹಾಳ ಕ್ರಾಸ್ ಬಳಿ ವಾಹನ ಅಡ್ಡಗಟ್ಟಿ ಪೊಲೀಸರು ದಂಡ ವಸೂಲಿ ಮಾಡ್ತಾ ಇದ್ರು. ಆದ್ರೆ ರಸ್ತೆಯ ಎರಡೂ ಬದಿಯಲ್ಲಿ ನಿಂತ ಅವೈಜ್ಞಾನಿಕವಾಗಿ ವಾಹನಗಳನ್ನು ಅಡ್ಡಗಟ್ಟುತ್ತಿದ್ದರು ಎನ್ನಲಾಗಿದೆ. ಹೀಗೆ ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಬಳಿ ವಾಹನ ಅಡ್ಡಗಟ್ಟಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ವಾಹನವೊಂದು ಹಳ್ಳಕ್ಕೆ ವಾಲಿದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ.

ಅಪಘಾತದ ಭೀಕರತೆಗೆ ವಾಹನದಲ್ಲಿದ್ದ ಕೆಲವರಿಗೆ ಗಾಯಗಳಾಗಿದ್ದು ಇನ್ನೂ ಕೆಲವರು ಆರೆ ಪ್ರಜ್ಞಾವಸ್ಥೆಯಲ್ಲಿದ್ದಾರೆ. ಪ್ರಕರಣದಿಂದ ಆಕ್ರೋಶಗೊಂಡ ಕೂಲಿಕಾರರು ಒಂದು ರಸ್ತೆ ಗಂಟೆ ಕಾಲ ಆಸ್ಪತ್ರೆಗೆ ಹೋಗದೆ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ ಹಾಗೂ ದಂಡ ವಸೂಲಿಗೆ ನಿಂತ ಪೊಲೀಸರನ್ನು ತಡೆದು ಪ್ರಕರಣಕ್ಕೆ ಪರಿಹಾರ ನೀಡಿ ನಿಮ್ಮ ದಂಡದ ಹಣ ತೆಗೆದುಕೊಳ್ಳಿ ಎಂದು ಹಣ ಕೊಟ್ಟ ಪ್ರಸಂಗ ಜರುಗಿತು.

ಸ್ಥಳಕ್ಕೆ ಗುಡಗೇರಿ ಪೊಲೀಸ್ ಠಾಣಾ ಪಿಎಸ್ಐ ಸವಿತಾ ಮುನ್ಯಾಳ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣಾ ಅಧಿಕಾರಿ ಸಿಪಿಐ ಎನ್.ಎಮ್.ದೇಶನೂರು ಪರಿಸ್ಥಿತಿ ತಿಳಿಗೊಳಿಸಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಿ ರಸ್ತೆ ತಡೆ ತಿಳಿಗೊಳಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

21/09/2021 04:19 pm

Cinque Terre

97.7 K

Cinque Terre

40

ಸಂಬಂಧಿತ ಸುದ್ದಿ