ಧಾರವಾಡ: ಬುಧವಾರ ಜರುಗಿದ ಪಶ್ಚಿಮ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಕರ್ತವ್ಯಲೋಪ ಎಸಗಿದ ಮೂವರು ಸರ್ಕಾರಿ ನೌಕರರನ್ನು ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಧಾರವಾಡ ಮಹಾನಗರ ಪಾಲಿಕೆಯ ಶಿರಸ್ತೆದಾರ ಎಂ.ವಿ.ಸಾಳುಂಕೆ, ಧಾರವಾಡ ತಹಶೀಲ್ದಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕರಾದ ಜೆ.ಬಿ.ಚಂದನಕರ ಹಾಗೂ ಅಡಿವೇಶ ಪರ್ವತಿ ಎಂಬವರೇ ಅಮಾನತುಗೊಂಡವರು.
ಮತಗಟ್ಟೆ ಸಿಬ್ಬಂದಿಗೆ ಪೂರೈಸಿದ ಚುನಾವಣಾ ಸಾಮಗ್ರಿಗಳ ಸಮರ್ಪಕ ವಿತರಣೆಯಲ್ಲಿ ಲೋಪ ಎಸಗಿದ ಹಿನ್ನೆಲೆಯಲ್ಲಿ ಈ ಮೂವರನ್ನೂ ಜಿಲ್ಲಾಧಿಕಾರಿಗಳು ಪ್ರಜಾಪ್ರತಿನಿಧಿ ಕಾಯ್ದೆ 1951 ಕಲಂ 28 (ಎ) ಅಡಿ ಹಾಗೂ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ, 1957ರ ನಿಯಮ 101 (ಎ) ಪ್ರಕಾರ ವಿಚಾರಣೆ ಬಾಕಿ ಇರಿಸಿ, ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿದ್ದಾರೆ.
Kshetra Samachara
29/10/2020 11:26 pm