ಹುಬ್ಬಳ್ಳಿ: ನಮಸ್ಕಾರ.... ಹುಬ್ಬಳ್ಳಿ-ಧಾರವಾಡ ನಟನಾ ಪ್ರತಿಭೆಗಳೆ, ನಿಮ್ಮಲ್ಲಿರುವ ಸುಪ್ತ ಕಲೆಯನ್ನು ಪ್ರದರ್ಶಿಸಲು ಇಲ್ಲಿದೆ ಒಂದು ಸುವರ್ಣ ಅವಕಾಶ. ಅಂತಹ ಕಲಾವಿದರಿಗೆ ಧಾರವಾಡ ಟಾಲ್ಕಿಸ್ ಎಂಬ ವೇದಿಕೆ ಕಲ್ಪಿಸಿಕೊಡಲು ಸನ್ನದ್ಧವಾಗಿದೆ.
ಧಾರವಾಡ ಜಿಲ್ಲೆಯ ಕಲಾವಿದರು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಆದರೆ ಬಹುತೇಕ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಇಲ್ಲದೇ ಕಲೆಯು ಎಲೆ ಮರೆಯ ಕಾಯಿಯಾಗಿ ಉಳಿದಿದ್ದಾರೆ. ಅಂತಹ ಪ್ರತಿಭೆಗಳನ್ನು ಗುರುತಿಸುವ ಮೂಲಕ ಹೊಸ ವೇದಿಕೆ ಕಲ್ಪಿಸಿ ಕೊಡಲು ಧಾರವಾಡ ಟಾಲ್ಕಿಸ್ ಸಿದ್ಧವಾಗಿದೆ.
ಪ್ರಕೃತಿ ಸೇವಾ ಸಹಯೋಗದೊಂದಿಗೆ ಧಾರವಾಡ ಟಾಲ್ಕಿಸ್ ಪ್ರಸ್ತುತ ಪಡಿಸುತ್ತಿರುವ ವೆಬ್ ಸಿರೀಸ್ ನಲ್ಲಿ ಅಭಿನಯಿಸಲು ಇಚ್ಛಿಸುವ ಆಸಕ್ತ ಕಲಾವಿದರಿಗೆ ಆಡಿಶನ್ ನಡೆಯಲಿದೆ. ಹೌದು...ಇದೇ ಅಕ್ಟೋಬರ್ 18ರಿಂದ 26 ರ ವರೆಗೆ ನೋಂದಣಿ ಮಾಡಿಸಿಕೊಳ್ಳಲು ಹಾಗೂ ಅರ್ಜಿ ಸಲ್ಲಿಸಲು ಅವಕಾಶವಿದ್ದು ಆಸಕ್ತ ಕಲಾವಿದರು ಧಾರವಾಡದ ಸಾದನಕೇರಿಯ ಹತ್ತಿರ ಬೇಂದ್ರೆ ಭವನದ ಹಿಂದುಗಡೆ ಇರುವ ಪ್ರಕೃತಿ ಸೇವಾ ಬಿಲ್ಡಿಂಗ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕಿದೆ. ಅಲ್ಲದೇ ನೋಂದಣಿ ಮಾಡಿಕೊಂಡು ಅರ್ಜಿ ಸಲ್ಲಿಸಿದ ಕಲಾವಿದರಿಗೆ ಅಕ್ಟೋಬರ್ 28ರಂದು ಧಾರವಾಡದ ರಂಗಾಯಣದಲ್ಲಿ ಆಡಿಶನ್ ನಡೆಯಲಿದೆ.
ನಿಮ್ಮಲ್ಲಿರುವ ಕಲೆಗೆ ಸೂಕ್ತ ವೇದಿಕೆ ಸಿಕ್ಕಿಲ್ಲವೇ. ನಿಮ್ಮ ಕಲೆಯನ್ನು ಪ್ರೋತ್ಸಾಹಿಸಿ ಚಪ್ಪಾಳೆಯ ಕೈಗಳು ದೊರೆತಿಲ್ಲವೇ ಹಾಗಿದ್ದರೇ ಮತ್ತೆ ಯಾಕೆ ತಡಮಾಡುತ್ತೀರಾ ಇಂದೇ ಭೇಟಿ ನೀಡಿ ಈ ಸುವರ್ಣ ಅವಕಾಶದಲ್ಲಿ ನಿಮ್ಮಗೊಂದು ವೇದಿಕೆ ಕಲ್ಪಿಸಿಕೊಳ್ಳಿ...
ಭೇಟಿ ಸ್ಥಳ..
ಪ್ರಕೃತಿ ಸೇವಾ ಬಿಲ್ಡಿಂಗ್.
ಬೇಂದ್ರೆ ಭವನದ ಹಿಂದುಗಡೆ, ಸಾಧನಕೇರಿ ಧಾರವಾಡ-580007
ದೂರವಾಣಿ ಸಂಖ್ಯೆ-8618496309, 8217420346, 9110861377 ಸಂಪರ್ಕಿಸಿ.
Kshetra Samachara
19/10/2021 12:52 pm