ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಇದ್ದೂ ಇಲ್ಲದಂತಾದ ಗ್ರಂಥಾಲಯ: ಓದುಗರಿಗೆ ಕೊಳಚೆ ಕಾಟ

ಕುಂದಗೋಳ : ಅದೊಂದು ಓದುಗರ ಆಲಯ ಜ್ಞಾನ ದೇಗುಲ ಗ್ರಂಥಾಲಯ ಅಲ್ಲಿ ಓದುಗರಿಗಾಗಿ 44 ಸಾವಿರದ 324 ಪುಸ್ತಕ, ಬಳಕೆಗಾಗಿ 2 ಕಂಪ್ಯೂಟರ್, 4 ಟ್ಯಾಬ್, 10 ದಿನಪತ್ರಿಕೆ 3 ಮ್ಯಾಗಜಿನ್ ಇವೆ.

ವಿಪರ್ಯಾಸ ಅಂದ್ರೇ ಡಿಜಿಟಲ್ ಗ್ರಂಥಾಲಯ ಸೌಲಭ್ಯ ಸಹ ಅಲ್ಲಿದೆ. ಆದ್ರೇ ಆ ಗ್ರಂಥಾಲಯಕ್ಕೆ ಕಾಲಿಡಲು ಸೂಕ್ತ ದಾರಿ, ಗ್ರಂಥಾಲಯದ ಸುತ್ತ ಸ್ವಚ್ಛತೆ ಇರದ ಕಾರಣ ಜನ ಅಲ್ಲಿಂದ ದೂರ ಉಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕುಂದಗೋಳ ಸಾರ್ವಜನಿಕ ಗ್ರಂಥಾಲಯದ ಸುತ್ತ ಕಲುಷಿತ ನೀರು ಸಂಗ್ರಹವಾಗಿದ್ದು, ಹಂದಿಗಳು ವಾಸವಾಗಿ ಕೊಳಚೆ ನಿರ್ಮಾಣವಾಗಿ ಸೊಳ್ಳೆಗಳ ಕಾಟ ಮೀತಿಮೀರಿದೆ. ಈ ಹಿನ್ನೆಲೆಯಲ್ಲಿ 1181 ಪುಸ್ತಕ ಎರವಲುದಾರರು ನಿತ್ಯ ಐವತ್ತಕ್ಕೂ ಅಧಿಕ ಓದುಗರನ್ನು ಹೊಂದಿದ ಗ್ರಂಥಾಲಯ ಇದೀಗ ಬಿಕೋ ಎನ್ನುವಂತಾಗಿದೆ.

ವಯೋವೃದ್ಧರು, ಅಂಗವಿಕಲರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸ್ಪರ್ಧಾ ಪರೀಕ್ಷೆ ಓದುಗರು ಬರುವ ಗ್ರಂಥಾಲಯ ಇದೀಗ ಕಲುಷಿತ ನೀರು ತುಂಬಿ ಅವ್ಯವಸ್ಥೆ ಆಗರವಾಗಿದ್ದು, ಮಳೆ ಆದ್ರೇ ಸಾಕು ಗ್ರಂಥಾಲಯ ಆವರಣ ನೀರಿನಲ್ಲೇ ಭರ್ತಿ ಆಗಿ ಬಿಡುತ್ತದೆ.

ಇನ್ನೂ ಸುತ್ತಲೂ ನೀರು ಸಂಗ್ರಹವಾದ ಪರಿಣಾಮ ಗ್ರಂಥಾಲಯದ ಗೋಡೆ, ನೆಲಹಾಸು ಕಲ್ಲು, ಬಿರುಕು ಬಿಟ್ಟು ಅಲ್ಲಿಯೂ ನೀರು ಬರುತ್ತಿದೆ, ಗೋಡೆಗಳು ಶಿಥಿಲ ಆಗ್ತಾ ಇವೆ. ಸದ್ಯ ಗ್ರಂಥಾಲಯದ ಎದುರು ಲೋಕೋಪಯೋಗಿ ಇಲಾಖೆ ಚರಂಡಿ ನಿರ್ಮಾಣ ಮಾಡ್ತಾ ಇದ್ದು, ಎತ್ತರದ ಚರಂಡಿ ಗೋಡೆ ನಿರ್ಮಾಣ ಕಾರಣ ಗ್ರಂಥಾಲಯ ಮತ್ತಷ್ಟೂ ದೂರ ಉಳಿದಿದೆ. ಈ ಬಗ್ಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಗಮನ ಹರಿಸಬೇಕಿದೆ.

Edited By : Somashekar
Kshetra Samachara

Kshetra Samachara

12/10/2022 07:34 pm

Cinque Terre

30.47 K

Cinque Terre

0

ಸಂಬಂಧಿತ ಸುದ್ದಿ