ಹುಬ್ಬಳ್ಳಿ: ಶೇರಿಗೆ ಸವಾ ಶೇರ್ ಆಗುವ ಮೂಲಕ ಸವಾಯಿ ಗಂಧರ್ವರಾಗಿದ್ದಾರೆ. ಹಿಂದೂಸ್ತಾನಿ ಸಂಗೀತ ಕ್ಷೇತ್ರಕ್ಕೆ ಮಾತ್ರವಲ್ಲದೆ ಭಾರತೀಯ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಕೊಡುಗೆಯನ್ನು ಸವಾಯಿ ಗಂಧರ್ವರು ನೀಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಹುಬ್ಬಳ್ಳಿಯ ದೇಶಪಾಂಡೆನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸವಾಯಿ ಗಂಧರ್ವರು ಹಿಂದುಸ್ತಾನಿ ಸಂಗೀತದ ಕಂಪನ್ನು ಹರಿಡಿಸುವಲ್ಲಿ ಬಹಳಷ್ಟು ಪರಿಶ್ರಮ ಪಟ್ಟವರು. ಗಂಗೂಬಾಯಿ ಹಾನಗಲ್, ಭೀಮಸೇನ ಜೋಶಿ ಅವರನ್ನು ಸಂಗೀತಕ್ಕಾಗಿ ಸಿದ್ದಪಡಿಸಿದವರು. ಸಂಗೀತಕ್ಕೆ ಭದ್ರ ಬುನಾದಿಯನ್ನು ಹಾಕಿದವರು ಸವಾಯಿ ಗಂಧರ್ವರು ಎಂದರು.
ಬಹಳಷ್ಟು ಜನ ಈಗಾ ಜಾತಿ ಜಾತಿಯಲ್ಲಿ ಬಡದಾಡುತ್ತಿದ್ದಾರೆ. ಆದರೆ ಸವಾಯಿ ಗಂಧರ್ವರನ್ನು ಮೈಸೂರು ಆಸ್ಥಾನದ ಪಂಡಿತರಾದ ಅಬ್ದುಲ್ ಕರೀಮ್ ಖಾನ್ ಕರೆದುಕೊಂಡು ಹೋಗಿ ಸಂಗೀತ ಕಲಿಸಿದ್ದರು. ಅಬ್ದುಲ್ ಕರೀಮ್ ಜಾನ್ ಅವರ ಗರಡಿ ಮನೆಯಲ್ಲಿ ಬೆಳೆದವರು ಸವಾಯಿ ಗಂಧರ್ವರು. ಈ ಮಣ್ಣು ಸಂಗೀತಕ್ಕಾಗಿ ಬಹಳಷ್ಟು ಮಹಾಪುರುಷರನ್ನು ನೀಡಿದೆ. ಇವತ್ತು ಸವಾಯಿ ಗಂಧರ್ವರ ಅಂಚೆ ಚೀಟಿ ಬಿಡುಗಡೆ ಮಾಡಿದ್ದು ನಮ್ಮ ಹೆಮ್ಮೆಯ ವಿಷಯ ಎಂದು ಅವರು ಹೇಳಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/10/2022 01:29 pm