ನವಲಗುಂದ : ನವಲಗುಂದ ಪಟ್ಟಣದ ಅಣ್ಣಿಗೇರಿ ಮಾರ್ಗದಲ್ಲಿ ಬಾಗಿದ ಕಂಬಗಳಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಆತಂಕ ಎದುರಾಗಿತ್ತು. ಈ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಈ ಹಿಂದೆ ಸುದ್ದಿಯನ್ನು ಸಹ ಬಿತ್ತರಿಸಿತ್ತು. ಇದಕ್ಕೆ ಸ್ಪಂದಿಸಿದ ಕೆಇಬಿ ಅಧಿಕಾರಿಗಳು ಮಂಗಳವಾರ ದುರಸ್ಥಿ ಕಾರ್ಯಕ್ಕೆ ಮುಂದಾಗಿದ್ದರು.
ಎಸ್... ಪಟ್ಟಣದ ನೀಲಮ್ಮನ ಕೆರೆಯಿಂದ ಅಣ್ಣಿಗೇರಿ ಮಾರ್ಗವಾಗಿ ತೆರಳುವ ರಸ್ತೆ ಬದಿಯ ನೀಲಮ್ಮನ ಕೆರೆಯ ಆವರಣದಲ್ಲಿರುವ ಬಾಗಿದ ಕಂಬಗಳು ನೆಲಕ್ಕುರುಳುವ ಆತಂಕವನ್ನು ಹೆಚ್ಚಿಸಿದ್ದವು. ಈಗ ಇದಕ್ಕೆ ಸ್ಪಂದಿಸಿದ ಸೆಕ್ಷನ ಆಫೀಸ್‌ರ ಬಾವಿಕಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ದುರಸ್ಥಿ ಕಾರ್ಯವನ್ನು ನಡೆಸಿದ್ದಾರೆ. ಇದು ನಿಮ್ಮ ಪಬ್ಲಿಕ್ ನೆಕ್ಸ್ಟ್ ಫಲಶೃತಿಯಾಗಿದೆ.
ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ
Kshetra Samachara
13/09/2022 07:00 pm