ಧಾರವಾಡ : ಸಂಪೂರ್ಣ ಕೆಸರಿನ ವಾತಾವರಣದಲ್ಲೇ ಮಹಿಳೆಯರು, ಮಕ್ಕಳು, ವೃದ್ಧರು, ವಾಸವಿರುವ ಈ ಸ್ಥಳದಲ್ಲಿ ಹೇಳೋರಿಲ್ಲ ಕೇಳೋರಿಲ್ಲದಂತಾಗಿದೆ. ದಿನಕ್ಕೆ ಅದೆಷ್ಟು ಬಾರಿ ಇಲ್ಲಿನ ಸ್ಥಳೀಯರು ಜಾರಿ ಬೀಳುತ್ತಾರೋ ಲೆಕ್ಕವೇ ಇಲ್ಲಾ. ಈ ಬಗ್ಗೆ ಅಧಿಕಾರಿಗಳು ಹಾಗೂ ಪಾಲಿಕೆ ಸದಸ್ಯರ ಗಮನಕ್ಕೆ ತಂದರೆ ಕೇವಲ ಭರವಸೆಯ ಮಾತು ಅಷ್ಟೇ...
ಎಸ್... ಇಷ್ಟೆಲ್ಲಾ ಸಮಸ್ಯೆಗಳಿರೋದು ಧಾರವಾಡದ ವಾರ್ಡ್ ನಂಬರ್ 20ರ ಶ್ರೀರಾಮ ನಗರದಲ್ಲಿ ಕರಿಯಮ್ಮ ದೇವಿ ದೇವಸ್ಥಾನಕ್ಕೆ ತೆರಳುವ ಹಾಗೂ ಮನೆಗಳಿರುವ ಇಂತಹ ಸ್ಥಳದಲ್ಲಿ ಮೊಹರಂ ಮಣ್ಣು ಸಹ ಕಾಣದೆ ಕಳೆದ ಹಲವಾರು ವರ್ಷಗಳಿಂದ ಜನರು ಜೀವನ ನಡೆಸುತ್ತಿರೋದು ನಾಗರಿಕ ಸಮಾಜ ತಲೆ ತಗ್ಗಿಸುವ ಸಂಗತಿ.
ಮನೆ ಬಾಗಿಲಿನಿಂದ ಕಾಲು ಹೊರ ಇಟ್ಟರೆ ಕೆಸರಲ್ಲೇ ಇಡುವ ದುಸ್ಥಿತಿ. ಸ್ಥಳೀಯರು ಎಷ್ಟೇ ಮನವಿ ಸಲ್ಲಿಸಿದರು ಕೇವಲ ಪಾಲಿಕೆ ಸದಸ್ಯೆ ಕವಿತಾ ಕಬ್ಬೆರ ಭರವಸೆ ನೀಡುತ್ತಿದ್ದಾರೆ ಎನ್ನುವ ಆರೋಪವಿದೆ. ಮೊಹರಂ ಮಣ್ಣು ಹಾಕಿದರೆ ತಾತ್ಕಾಲಿಕವಾಗಿ ಸಮಸ್ಯೆ ಬಗೆ ಹರಿಯುತ್ತೆ, ಆದರೆ ಅದನ್ನು ಹಾಕಿಸಲು ಸಹ ಕೇವಲ ಭರವಸೆ ನೀಡುತ್ತಾ ದಿನಗಳನ್ನು ಮುಂದುಡುತ್ತಿರೋದು ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿದೆ.
ಆಟೋ ಸಹ ಸಂಚರಿಸಲಾಗದೆ ಪರದಾಟ ನಡೆಸುವಂತಹ ದೃಶ್ಯಗಳು ಸಹ ಇಲ್ಲಿ ಕಂಡು ಬಂದಿವೆ. ಕೂಡಲೇ ಪಾಲಿಕೆ ಆಯುಕ್ತರು, ಪಾಲಿಕೆ ಸದಸ್ಯರು ಹಾಗೂ ಶಾಸಕರು ಎಚ್ಛೆತ್ತುಕೊಂಡು ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕಿದೆ.
ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ಧಾರವಾಡ
Kshetra Samachara
05/09/2022 03:41 pm