ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಆಜಾದಿ ಕಾ ಅಮೃತ ಮಹೋತ್ಸವ ಹರ್ ಘರ್ ಧ್ವಜ ವಿತರಣೆ

ಕುಂದಗೋಳ : 75ನೇ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಪ್ರಧಾನ ಮಂತ್ರಿಯವರ ಹರ್ ಘರ್ ತಿರಂಗಾ ಕಾರ್ಯಕ್ರಮಕ್ಕೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರು ಸರ್ವ ಸದಸ್ಯರು ಅಧಿಕಾರಿಗಳು ಚಾಲನೆ ನೀಡಿದರು.

ಹೌದು ! ಕುಂದಗೋಳ ಪಟ್ಟಣ ಪಂಚಾಯಿತಿ ವತಿಯಿಂದ ಈಗಾಗಲೇ ಕುಂದಗೋಳದ ಪ್ರತಿ ಮನೆ ಮೇಲೆ ಹಾರಿಸಲು 3500 ರಾಷ್ಟ್ರ ಧ್ವಜ ಖರೀದಿಸಿದ್ದು ಅವುಗಳನ್ನು ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ವಿತರಣೆ ಮಾಡಿದರು.

ತಲಾ ಒಂದು ಧ್ವಜಕ್ಕೆ 25 ರೂಪಾಯಿಯಂತೆ ಧ್ವಜ ವಿತರಣೆ ಸಾಂಕೇತಿಕ ಚಾಲನೆ ನೀಡಿದ್ದು ಕುಂದಗೋಳ ಪಟ್ಟಣದ 19 ವಾರ್ಡಗಳ ನಿವಾಸಿಗಳಿಗೆ ಪ್ರತಿ ಮನೆಗೊಂದು ಧ್ವಜ ವಿತರಣೆ ಮಾಡಲಾಗುವುದು ಎಂದು ಅಧ್ಯಕ್ಷ ಪ್ರಕಾಶ್ ಕೋಕಾಟೆ ಹೇಳಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾರಾಯಣ್ ಡೊಂಬರ್ ಈ ಕಾರ್ಯಕ್ರಮದಲ್ಲಿ ಜನರಿಗೆ ಹರ್ ಘರ್ ತಿರಂಗಾ ಕಾರ್ಯಕ್ರಮದ ಕುರಿತು ತಿಳಿಸಿ ಆಗಸ್ಟ್ 13 ರಿಂದ 15ರ ವರೆಗೆ ತಮ್ಮ ಮನೆ ಮೇಲೆ ಧ್ವಜ ಹಾರಿಸಲು ತಿಳಿಸಿದರು.

Edited By : PublicNext Desk
Kshetra Samachara

Kshetra Samachara

10/08/2022 04:30 pm

Cinque Terre

11.37 K

Cinque Terre

0

ಸಂಬಂಧಿತ ಸುದ್ದಿ