ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ಪಬ್ಲಿಕ್ ನೆಕ್ಸ್ಟ್ ಸುದ್ದಿಗೆ ಶಾಸಕರು ಮೆಚ್ಚುಗೆ: ಸದ್ಯದಲ್ಲೇ ಅಭಿವೃದ್ಧಿ ಕಾರ್ಯ ಆರಂಭ

ಅಳ್ನಾವರ: 'ಗೌಳಿಗರ ಏಳ್ಗೆಗೆ ಮಿಡಿಯಲಿ ಮನ' ಎಂಬ ಶೀರ್ಷಿಕೆಯಡಿ ಗೌಳಿಗರ ಕುರಿತಾಗಿ ನಿಮ್ಮ ನೆಚ್ಚಿನ ಪಬ್ಲಿಕ್ ನೆಕ್ಸ್ಟ್ ಸುದ್ದಿ ವಾಹಿನಿಯಲ್ಲಿ ಕಳೆದ ಹದಿನೈದು ದಿನಗಳ ಹಿಂದೆ ಸುದ್ದಿಯೊಂದು ಪ್ರಸಾರವಾಗಿತ್ತು. ಅದನ್ನ ವೀಕ್ಷಿಸಿದ ಅಳ್ನಾವರ ತಾಲೂಕು ಕಲಘಟಗಿ ಮತ ಕ್ಷೇತ್ರದ ಶಾಸಕ ಸಿ,ಎಂ,ನಿಂಬಣ್ಣವರ ಅವರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಬ್ಲಿಕ್ ನೆಕ್ಸ್ಟ್ ಮಾಧ್ಯಮದಲ್ಲಿ ಸುದ್ದಿ ಪ್ರಸಾರವಾದ ಬಳಿಕ ಅದನ್ನು ನಾವು ಕೂಡಾ ಗಮನಿಸಿದ್ದೇವೆ. ಅಭಿವೃದ್ಧಿ ಬಗ್ಗೆ ತಮಗಿರುವ ಕಾಳಜಿಗೆ ನಾನು ಚಿರಋಣಿ ಯಾಗಿದ್ದೇನೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೊಬ್ಬರೂ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಬಾರದು.ಹಾಗಾದಲ್ಲಿ ಆ ಹಳ್ಳಿ ಜನರಿಂದ ಆಯ್ಕೆಯಾದ ನಾವು ಶಾಪಗ್ರಸ್ಥರಾಗುತ್ತೇವೆ ಎಂದರು. ಸಂಬಂಧಪಟ್ಟ ಅಧಿಕಾರಿಗಳೊಡನೆ ಈಗಾಗಲೇ ನಾನು ಮಾತನಾಡಿದ್ದು ಆದಷ್ಟು ಶೀಘ್ರವೇ ಕಾರ್ಯಾರಂಭ ಮಾಡಲಾಗುತ್ತದೆ ಎಂದರು.

ಅಭಿವೃದ್ಧಿ ಪರ ಹಾಗೂ ಜನರಿಗಾಗಿ ಸದಾ ಮಿಡಿಯುವ ಪಬ್ಲಿಕ್ ನೆಕ್ಸ್ಟ್ ಕಾರ್ಯಕ್ಕೆ ಶಾಸಕರು ಸಂತಸ ವ್ಯಕ್ತಪಡಿಸಿದರು.ಆದಷ್ಟು ಬೇಗ ಗೌಳಿ ಜನರಿಗೆ ಮೂಲಭೂತ ಸೌಕರ್ಯಗಳನ್ನ ಒದಗಿಸಿ ಕೊಡುತ್ತೇವೆ ಎಂದು ಹೇಳಿದರು.

-ಮಹಾಂತೇಶ ಪಠಾಣಿ ಪಬ್ಲಿಕ್ ನೆಕ್ಸ್ಟ್ ಅಳ್ನಾವರ

Edited By : Shivu K
Kshetra Samachara

Kshetra Samachara

06/08/2022 04:06 pm

Cinque Terre

18.66 K

Cinque Terre

1

ಸಂಬಂಧಿತ ಸುದ್ದಿ