ಅಳ್ನಾವರ:ಸತತ ಎಂಟು ವರ್ಷಗಳಿಂದ ಬೆನಚಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಆನಂದ ಕೆಂಚಪ್ಪನವರ ಅವರು ಬೇರೆಡೆಗೆ ವರ್ಗಾವಣೆಯಾದ ಬೆನ್ನಲ್ಲೇ ಅವರಿಗೆ ಬೆನಚಿ ಗ್ರಾಮ ಪಂಚಾಯಿತಿ ಸದಸ್ಯರು,ಅಧ್ಯಕ್ಷರು,ಉಪಾಧ್ಯಕ್ಷರು, ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ಜರುಗಿತು.
ನಿಸ್ವಾರ್ಥ ಸೇವೆ ಇಂದ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿದ ಆನಂದ ಕೆಂಚಪ್ಪನವರ ಅವರ ಮುಂದಿನ ಸೇವೆ ಇನ್ನು ಹೆಚ್ಚಿನ ಮಟ್ಟದಲ್ಲಿ ಸರ್ವರಿಗೂ ದೊರಕಲಿ ಎಂದು ಬೆನಚಿ ಗ್ರಾ.ಪಂ ಮಾಜಿ ಅಧ್ಯಕ್ಷ,ಹಾಲಿ ಸದಸ್ಯ ಸಂದೀಪ್ ಪಾಟೀಲ್ ಆಶಿಸಿದರು.ಆನಂದ ಕೆಂಚಪ್ಪನವರಿಗೆ ಮಾಲೆ ಹಾಕಿ ಶಾಲು ಹೊದಿಸಿ ಹಣ್ಣು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಉಮೇಶ ಕದಂ,ಉಪಾಧ್ಯಕ್ಷರು,ಸದಸ್ಯರು,ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
21/07/2022 06:43 pm