ಕಲಘಟಗಿ: ತಾಲೂಕಿನಲ್ಲಿ ಬಸ್ಸುಗಳ ಸಮಸ್ಯೆ ಬಗೆಹರಿಯುವ ಹಾಗೆ ಕಾಣುತ್ತಿಲ್ಲ. ಯಾಕೆಂದರೆ ಪ್ರತಿದಿನ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಶಾಲಾ- ಕಾಲೇಜುಗಳಿಗೆ ಹೋಗಿ- ಬರಲು ಬಸ್ ಇಲ್ಲದ ಕಾರಣ ಇದ್ದ ಬಸ್ಸುಗಳನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.
ಕಲಘಟಗಿ ಪಟ್ಟಣದಲ್ಲಿ ಅಲ್ಲದೆ ಗ್ರಾಮೀಣ ಭಾಗದಿಂದ ಬರಲು ಬಸ್ಸುಗಳು ಇಲ್ಲದೆ, ಬಸ್ಸುಗಳನ್ನು ತಡೆಯುತ್ತಿದ್ದಾರೆ. ವಿದ್ಯಾರ್ಥಿಗಳು ಓದಿನತ್ತ ಗಮನ ಕೊಡದೆ ಬಸ್ಸುಗಳ ಸಮಸ್ಯೆಯ ಬಗ್ಗೆಯೇ ಅತಿ ಹೆಚ್ಚು ಗಮನ ಕೊಡಬೇಕಾದಂತಹ ಪರಿಸ್ಥಿತಿ ಬಂದೊದಗಿದೆ.
ಇರುವ ಒಂದು ಬಸ್ಸಿನ ಬಾಗಿಲಿನಲ್ಲಿ ನೇತಾಡಿಕೊಂಡು ಹೋಗುವ ಸ್ಥಿತಿ ಬಂದಿದೆ. ಹಲವು ಬಾರಿ ಸ್ಥಳೀಯ ಶಾಸಕರಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಒಂದು ದಿನವಾದರೂ ಬಸ್ ನಿಲ್ದಾಣಕ್ಕೆ ಬಂದು ವಿದ್ಯಾರ್ಥಿಗಳ ಸಮಸ್ಯೆ ಕಣ್ಣಾರೆ ಕಂಡಿದ್ದರೆ ಮಕ್ಕಳ ದಿನನಿತ್ಯದ ಗೋಳು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ತಿಳಿಯುತ್ತಿತ್ತು.
ಚುನಾವಣೆ ನಂತರ ಕಲಘಟಗಿ ಕ್ಷೇತ್ರವನ್ನು ಮರೆತ ಪ್ರಹ್ಲಾದ ಜೋಶಿಯವರು ಕೂಡ ಈ ಸಮಸ್ಯೆಯತ್ತ ಚಿತ್ತ ಹರಿಸಬೇಕಾಗಿದೆ ಹಾಗೂ ಶಾಸಕರು, ಸಾರಿಗೆ ಸಚಿವರು ಈ ಸಂಕಷ್ಟಕ್ಕೆ ಶೀಘ್ರ ಸ್ಪಂದಿಸಬೇಕಾಗಿದೆ.
-ಉದಯ ಗೌಡರ, ಪಬ್ಲಿಕ್ ನೆಕ್ಸ್ಟ್ ಕಲಘಟಗಿ.
Kshetra Samachara
21/07/2022 06:42 pm