ಕುಂದಗೋಳ : ನಿತ್ಯ ಕಸ ಹೊರುವ, ಚರಂಡಿ ಸ್ವಚ್ಚ ಮಾಡುವ, ಅನೈರ್ಮಲ್ಯ ಕಂಡರೆ ಓಡೋಡಿ ಬಂದು ಸ್ವಚ್ಚ ಮಾಡುವ ಪೌರ ಕಾರ್ಮಿಕರಿಗೆ ಕರ್ತವ್ಯ ರಕ್ಷಣೆಗಾಗಿ ಬಳಸುವ ಪರಿಕರಗಳನ್ನು ಇಲ್ಲೊಂದು ಪಂಚಾಯಿತಿ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಕುಂದಗೋಳ ತಾಲೂಕಿನ ಗ್ರೇಡ್ -1 ಗುಡಗೇರಿ ಗ್ರಾಮ ಪಂಚಾಯಿತಿ ಮೇಲೆ ಇಂತಹ ಆರೋಪ ಕೇಳಿ ಬಂದಿದೆ. ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 8 ಜನ ಪೌರ ಕಾರ್ಮಿಕರಿಗೆ ರೇನ್ ಕೋಟ್, ಹ್ಯಾಂಡ್ ಗ್ಲೌಸ್, ಮಾಸ್ಕ್, ಶೂ, ನೀಡಿಲ್ಲಾ ಎಂದು ಮಾಜಿ ಗ್ರಾಮ ಪಂಚಾಯಿತಿ ಸದಸ್ಯರೇ ಆರೋಪ ಮಾಡಿದ್ದಾರೆ.
ಅಲ್ಲದೇ ಗುಡಗೇರಿ ಗ್ರಾಮ ಪಂಚಾಯಿತಿ ಹಾಗೂ ಯರೇಬೂದಿಹಾಳ ಗ್ರಾಮ ಪಂಚಾಯಿತಿ ಸೇರಿ ಒಬ್ಬ ಪಿಡಿಓ ನೇಮಕ ಮಾಡಿದ್ದು, ಅಭಿವೃದ್ಧಿ ಕೆಲಸಗಳು ವಿಳಂಬ ಆಗ್ತಾ ಇವೆ ಎಂಬ ಮಾತುಗಳು ಕೇಳಿ ಬಂದಿವೆ. ಇನ್ನೂ ಗುಡಗೇರಿ ಗ್ರಾಮ ಪಂಚಾಯಿತಿ ಪೌರ ಕಾರ್ಮಿಕರನ್ನು ನಿಮಗೆ ಅಗತ್ಯ ಸೌಕರ್ಯ ಸಿಕ್ಕಿಲ್ವಾ ಎಂದು ಪ್ರಶ್ನೆ ಮಾಡಿದ್ರೇ, ಕರ್ತವ್ಯದ ಭಯದಲ್ಲಿ ಹು, ಹಾ ಎಂದು ಗೊಣಗುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳು ಗಮನಿಸಬೇಕಿದೆ.
-ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್, ಕುಂದಗೋಳ
Kshetra Samachara
06/07/2022 02:03 pm