ಕಲಘಟಗಿ: ಪಟ್ಟಣದ ಬೆಂಡಿಗೇರಿ ಓಣಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬಳಸುವ ನೀರಿನ ಅವ್ಯವಸ್ಥೆ ನೋಡಿದರೆ ಶಾಲೆಯ ಮಕ್ಕಳು ಯಾವ ಪರಿಸ್ಥಿತಿಯಲ್ಲಿ ಇಲ್ಲಿಯ ನೀರನ್ನು ಬಳಸಬೇಕು ಎಂಬುದು ತಿಳಿಯುತ್ತಿಲ್ಲ.
ಈ ಶಾಲೆಯಲ್ಲಿ ಮಕ್ಕಳಿಗೆ ಬಳಸಲಿಕ್ಕೆ ನೀರಿನ ಟಾಕಿ ಇದ್ದು ಆ ಟಾಕಿಯ ವ್ಯವಸ್ಥೆ ನೋಡಿದರೆ, ನೀವು ಕೂಡ ಇದರ ಸಮೀಪ ಹೋಗುವದಕ್ಕೆ ವಿಚಾರ ಮಾಡುತ್ತಿರಾ.ಇಂತಹ ನೀರನ್ನು ಮಕ್ಕಳು ಹೇಗೆ ಬಳಸುತ್ತಾರೋ ತಿಳಿಯುತ್ತಿಲ್ಲ. ಈ ನೀರಿನ ಟಾಕಿಗೆ ನಲ್ಲಿಗಳು ಇದ್ದು, ಇದರ ತೋಟೆ ಹಾಳಾಗಿದೆ. ನೀರು ತುಂಬಿಸಿದರೆ ನೀರು ಸಂಪೂರ್ಣ ವ್ಯರ್ಥವಾಗುತ್ತಿದೆ.
ಇಷ್ಟೆಲ್ಲಾ ನೀರು ಪೋಲಾಗುತ್ತಿದ್ದರು ಇದಕ್ಕೆ ಸಂಬಂಧಪಟ್ಟವರು ಮಾತ್ರ ಇತ್ತಕಡೆ ಗಮನ ಹರಿಸುತ್ತಿಲ್ಲ. ಈ ಒಂದು ಅವ್ಯವಸ್ಥೆ ಬಗ್ಗೆ ಶಾಲೆಯವರು ಗಮನ ಹರಿಸದೆ ಇರುವುದು ವಿಪರ್ಯಾಸ ಆಗಿದೆ. ಈ ಕೂಡಲೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಸರಿಪಡಿಸಬೇಕಾಗಿದೆ.
ವರದಿ: ಉದಯ ಗೌಡರ
Kshetra Samachara
27/06/2022 03:35 pm