ಕುಂದಗೋಳ: ಮಾನ್ಯ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳೇ ಕಳೆದ ಹಲವಾರು ದಿನಗಳಿಂದ ಬಂದ್ ಆದ ಹಿರೇಹರಕುಣಿ ಗ್ರಾಮದ ಬೀದಿ ಬದಿ ದೀಪಗಳು ಇನ್ನೂ ಆರಂಭವಾಗಿಲ್ಲ ಎಂದು ಜನ ಅಧಿಕಾರಿಗಳನ್ನು ದೂರುತ್ತಿದ್ದಾರೆ.
ಹಿರೇಹರಕುಣಿ ಗ್ರಾಮದ ಗುಡ್ಡದಕೇರಿ ಓಣಿಯಲ್ಲಿನ ಬೀದಿ ದೀಪಗಳು ಬಂದ್ ಆಗಿದ್ದು, ಅದರಲ್ಲಿ ಕೆಲವು ಬೀದಿ ದೀಪ ಆನ್ ಆಗುವುದು ಆಫ್ ಆಗುವುದು ಮಾಡ್ತಾ ತಾಂತ್ರಿಕ ಸಮಸ್ಯೆ ಎದುರಿಸಿವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸುಮ್ಮನೆ ಇದ್ದಾರೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಬೀದಿ ದೀಪ ಬೆಳಗದ ಸಮಸ್ಯೆ ಅನುಭವಿಸಿ ಗ್ರಾಮಸ್ಥರು ಪುನಃ ಪಬ್ಲಿಕ್ ನೆಕ್ಸ್ಟ್'ಗೆ ವಿಡಿಯೋ ಕಳುಹಿಸಿ ಸಮಸ್ಯೆ ವಿವರಿಸಿದ್ದಾರೆ. ಈ ಬಗ್ಗೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳೇ ಸೂಕ್ತ ಕ್ರಮ ಜರುಗಿಸಿ ಹಿರೇಹರಕುಣಿ ಗ್ರಾಮದ ಬೀದಿಗೆ ಬೆಳಕು ನೀಡಬೇಕಿದೆ.
ವೀಕ್ಷಕರ ವರದಿ
Kshetra Samachara
23/06/2022 04:52 pm