ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಹಿರೇಹರಕುಣಿ ಗ್ರಾಮಸ್ಥರಿಗೆ ಕಾಡುತ್ತಿದೆ ಕತ್ತಲು: ಬೆಳಕು ಕೊಡಿ ಸರ್

ಕುಂದಗೋಳ: ಎತ್ತ ನೋಡಿದರತ್ತ ಕತ್ತಲು ಸಾರ್ವಜನಿಕರ ಓಡಾಟಕ್ಕೆ ಭಯ.ಈ ಕತ್ತಲು ಎಲ್ಲಿಯದು ಅಂದ್ರಾ? ಇದು ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಜನರ ಪರಿಸ್ಥಿತಿ.

ಹಿರೇಹರಕುಣಿ ಗ್ರಾಮದ ಎರಡು ಬೀದಿಗಳಲ್ಲಿ ಕಳೆದ ಹಲವಾರು ದಿನಗಳಿಂದ ಬೀದಿ ದೀಪಗಳು ಬಂದ್ ಆಗಿವೆ. ಹೀಗಾಗಿ ಬೀದಿ ತುಂಬೆಲ್ಲ ಕತ್ತಲು ಆವರಿಸಿದೆ. ಈ ಬಗ್ಗೆ ಸಾರ್ವಜನಿಕರು ಸ್ಥಳೀಯ ಗ್ರಾಮ ಪಂಚಾಯಿತಿ ಗಮನಕ್ಕೆ ತಂದರೂ ವಿದ್ಯುತ್ ವ್ಯವಸ್ಥೆ ಸರಿಪಡಿಸಿದ ಹಿನ್ನೆಲೆಯಲ್ಲಿ ಪಬ್ಲಿಕ್ ನೆಕ್ಸ್ಟ್‌ಗೆ ವಿಡಿಯೋ ಕಳುಹಿಸಿದ್ದಾರೆ.

ಗ್ರಾಮಸ್ಥರು ಹೇಳುವ ಪೈಕಿ ಕಳೆದ ಹದಿನೈದು ದಿನಗಳಿಂದ ಈ ರೀತಿ ಕತ್ತಲಲ್ಲೇ ಜೀವನ ಸಾಗಿಸುತ್ತಿದ್ದು ಚಿಕ್ಕ ಮಕ್ಕಳು ಹೊರಗಡೆ ಓಡಾಡಲು ಭಯವಿದ್ದು ಬೀದಿ ದೀಪ ಈ ರೀತಿ ಬೆಳಗುವುದು ಬಂದ್ ಆಗುವ ಸ್ಥಿತಿ ಸಾಮಾನ್ಯವಾಗಿದೆ ಎನ್ನಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಜನಪ್ರತಿನಿಧಿಗಳು ಗಮನಿಸಬೇಕಿದೆ.

Edited By : Manjunath H D
Kshetra Samachara

Kshetra Samachara

16/06/2022 08:47 pm

Cinque Terre

20.39 K

Cinque Terre

0

ಸಂಬಂಧಿತ ಸುದ್ದಿ