ಅಳ್ನಾವರ: ನಶಿಸಿ ಹೋಗುತ್ತಿರುವ ಕಾಡನ್ನು ಹಾಗೂ ಅಳಿವಿನಂಚಿನಲ್ಲಿರುವ ಅಮೂಲ್ಯವಾದ ಜ್ಯಾತಿ ಪ್ರಭೇದದ ಸಸಿಗಳನ್ನು ಮತ್ತೆ ನೆಟ್ಟು,ದಟ್ಟಾರಣ್ಯ ವನ್ನಾಗಿ ನಿರ್ಮಾಣ ಮಾಡಿ, ಸಮೃದ್ಧವಾದ ಹಸಿರನ್ನ ನಾಡಿಗೆ ಕೊಡುವ ನಿಟ್ಟಿನಲ್ಲಿ ರಾಜ್ಯದೆಲ್ಲೆಡೆ 'ಬೀಜ ಬಿತ್ತೋತ್ಸವ' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.
ಅಳ್ನಾವರ ತಾಲೂಕಿನ ಬೆನಚಿ,ಡೋರಿ,ಅರವಟಗಿ ಸೇರಿದಂತೆ ನಾಲ್ಕು ಅರಣ್ಯ ವಲಯಗಳಲ್ಲಿ ಸರ್ಕಾರದ ಆದೇಶದ ಮೇರೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ಬೀಜಗಳನ್ನ ಬಿತ್ತುವ ಕಾರ್ಯವನ್ನ ಮಾಡುತ್ತಿದ್ದಾರೆ.
ಇಲ್ಲಿ ವಿಶೇಷವಾದದ್ದು ಏನೆಂದರೆ ಪ್ರೌಢ ಶಾಲೆಯ ಮಕ್ಕಳನ್ನ ಕರೆದು ಅವರಿಗೆ ಅರಣ್ಯದ ಬಗ್ಗೆ ಜಾಗೃತಿ ಮೂಡಿಸಿ ಅವರ ಕೈಯಾರೆ ಬೀಜಗಳನ್ನ ನೆಡುವ ಮೂಲಕ ಅರಣ್ಯವನ್ನ ಬೆಳೆಸುವುದರ ಜೊತೆಗೆ,ಅದರ ಉಪಯೋಗವನ್ನ ನೈಜವಾಗಿ ಅರಿವು ಮೂಡಿಸುವ ಕೆಲಸ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮಾಡುತ್ತಿದ್ದಾರೆ.
ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು ಎಂಬ ಘೋಷವಾಕ್ಯದೊಂದಿಗೆ ಉಪವಲಯ ಅರಣ್ಯಾಧಿಕಾರಿ ಎಂ,ಡಿ,ಲಮಾಣಿ ಅವರ ನೇತೃತ್ವದ ತಂಡ ಈ ಬೀಜ ಬಿತ್ತನೆ ಕಾರ್ಯಕ್ರಮ ವನ್ನ ಅತ್ಯಂತ ಯಶಸ್ವಿಯಾಗಿ ನಡೆಸಿದ್ದಾರೆ.ಈ ಸಂದರ್ಭದಲ್ಲಿ ವಲಯ ಅರಣ್ಯ ಅಧಿಕಾರಿ ಎಸ್,ಆರ್,ಉಪ್ಪಾರ. ಇಶ್ರತಲಿ ಹಳ್ಳಾಳ ಬೆನಚಿ ಗ್ರಾ,ಪಂ ಅಧ್ಯಕ್ಷರು,ಸದಸ್ಯರು ಹಾಜರಿದ್ದರು.
Kshetra Samachara
12/06/2022 11:09 am