ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಚೌಡಿ ಆವರಣದಲ್ಲಿ ಹಂದಿಗಳ ರಾಜ್ಯಭಾರ, ಸಾಂಕ್ರಾಮಿಕ ಭೀತಿಯಲ್ಲಿ ಸ್ಥಳೀಯರು

ನವಲಗುಂದ : ನವಲಗುಂದ ಪುರಸಭೆ ಸ್ವಚ್ಛತೆಗಾಗಿ ನಾನಾ ಕೆಲಸಗಳನ್ನು ಮಾಡುತ್ತಿದೆ. ಆದರೆ ಕೆಲವು ಸ್ಥಳಗಳು ಪುರಸಭೆ ಕಾಣದಂತೆ ಮರೆಯಾಗಿವೆ. ಆ ಪಟ್ಟಿಗೆ ಈಗ ನವಲಗುಂದ ಪಟ್ಟಣದ ಚೌಡಿ ಸಹ ಸೇರಿದೆ. ಚೌಡಿ ಆವರಣದಲ್ಲಿ ಹಂದಿಗಳು ರಾಜಾರೋಷವಾಗಿ ಸಂಚರಿಸುತ್ತವೆ. ಅದಕ್ಕೆ ಕಾರಣ ಇಲ್ಲಿನ ಕೊಳಚೆ ಅನ್ನೋದು ಸ್ಥಳೀಯರ ಮಾತು.

ಎಸ್... ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಸುರಿದ ಮಳೆಗೆ ಚೌಡಿ ಆವರಣದಲ್ಲಿ ನೀರು ನಿಂತು ಸ್ಥಳೀಯರಲ್ಲಿ ಸಾಂಕ್ರಾಮಿಕ ರೋಗದ ಆತಂಕ ಹೆಚ್ಚಿಸಿದೆ. ನಿಂತ ನೀರಿನಲ್ಲಿ ಹಂದಿಗಳು ಆಟವಾಡುತ್ತಿವೆ. ಇಂತಹ ಸ್ಥಳ ಸ್ವಚ್ಛವಾಗಬೇಕು, ನೀರು ನಿಲ್ಲುವ ಸ್ಥಳದಲ್ಲಿ ಮೊಹರಂ ಹಾಕುವ ಮೂಲಕ ಪುರಸಭೆ ಸ್ವಚ್ಛತೆಗೆ ಮುಂದಾಗಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಇದೆ ಸ್ಥಳದಲ್ಲಿ ಸರ್ಕಾರಿ ಕಚೇರಿ ಸಹ ಇದೆ. ಸಾರ್ವಜನಿಕರು ಕೂತು ವಿಶ್ರಾಂತಿ ಮಾಡುವ ಸ್ಥಳ ಇದಾಗಿದೆ. ಈ ಸ್ಥಳವನ್ನು ಪುರಸಭೆ ಸಿಬ್ಬಂದಿ ಪ್ರತಿದಿನ ಸ್ವಚ್ಛಗೋಳಿಸುತ್ತಾರಂತೆ ಆದರೆ ಪೂರ್ಣ ಪ್ರಮಾಣದಲ್ಲಿ ಇಲ್ಲಾ ಎಂಬುದು ಇಲ್ಲಿನ ಕೊಳಚೆಗೆ ಕಾರಣವಾಗಿದೆಯಂತೆ, ಈ ಬಗ್ಗೆ ಪುರಸಭೆ ಅಧಿಕಾರಿಗಳು ಎಚ್ಚೆತ್ತು ಸ್ವಚ್ಛತೆಗೆ ಮುಂದಾಗಬೇಕಿದೆ.

ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ

Edited By : PublicNext Desk
Kshetra Samachara

Kshetra Samachara

11/06/2022 11:32 am

Cinque Terre

7.96 K

Cinque Terre

0

ಸಂಬಂಧಿತ ಸುದ್ದಿ