ನವಲಗುಂದ: ಶಿಥಿಲಗೊಂಡ ಬಸ್ ನಿಲ್ದಾಣದಿಂದ ಈಗ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಜನರು ಬಸ್ ನಿಲ್ದಾಣದ ಒಳಗಡೆ ನಿಲ್ಲೋಕು ಭಯ ಪಡುವ ವಾತಾವರಣ ಸೃಷ್ಟಿಯಾಗಿದೆ. ಮಳೆಗಾಲ ಹಾಗೂ ಬೇಸಿಗೆಯಲ್ಲಂತು ಸಮಸ್ಯೆ ಹೇಳತೀರದ್ದು, ಈ ಎಲ್ಲಾ ಸಮಸ್ಯೆ ಕಂಡು ಬಂದದ್ದು ತಾಲ್ಲೂಕಿನ ಖನ್ನೂರ ಗ್ರಾಮದ ಬಸ್ ನಿಲ್ದಾಣದಲ್ಲಿ.
ನವಲಗುಂದ ತಾಲ್ಲೂಕಿನ ನಾಯಕನೂರ ಗ್ರಾಮ ಪಂಚಾಯತ್ ಗೆ ಒಳಪಡುವ ಖನ್ನೂರ ಗ್ರಾಮದ ಬಸ್ ನಿಲ್ದಾಣ ಈಗ ಅಧಿಕಾರಿಗಳ ನಿರ್ಲಕ್ಷಕ್ಕೆ ಒಳಗಾಗಿದೆ ಎಂಬ ಆರೋಪ ದಟ್ಟವಾಗಿದೆ. ದೊಡ್ಡ ಮಳೆ, ಗಾಳಿ ಬೀಸಿದ್ದಲ್ಲಿ ಅವಘಡದ ಆತಂಕ ಇದೆ ಅನ್ನೋ ಮಾತುಗಳು ಗ್ರಾಮಸ್ಥರದ್ದು.
ಬಸ್ ನಿಲ್ದಾಣದಲ್ಲಿ ಶವ ಸಾಗಿಸುವ ಪೆಟ್ಟಿಗೆ ಸಹ ಇಡಲಾಗಿದೆ. ಇದರಿಂದಾಗಿ ಸಾರ್ವಜನಿಕರು ಒಳಗೆ ನಿಲ್ಲಲು ಸಹ ಆಗದಂತಾಗಿದೆ. ಬಸ್ ನಿಲ್ದಾಣದ ಸುತ್ತಲಿನ ಸ್ವಚ್ಛತೆಯ ಬಗ್ಗೆಯೂ ಸಹ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.
ಈ ಸಮಸ್ಯೆ ಬಗ್ಗೆ ನಾಯಕನೂರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ವೀರನಗೌಡ ಪಾಟೀಲ ಅವರ ಗಮನಕ್ಕೆ ತಂದಾಗ ಬಸ್ ನಿಲ್ದಾಣದ ದುರಸ್ಥಿಗಾಗಿ ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಪತ್ರ ಬರೆಯುತ್ತೇವೆ. ಹಾಗೂ ನಿರ್ವಹಣೆ ಮಾಡುತ್ತೇವೆ ಎಂದು ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದ್ದಾರೆ.
Kshetra Samachara
02/06/2022 01:30 pm