ಕುಂದಗೋಳ: ರಾಜ್ಯಾದ್ಯಂತ ನಾಳೆ ಪೆಟ್ರೋಲ್, ಡೀಸೆಲ್ ಮುಷ್ಕರಕ್ಕೂ ಮೊದಲು ಇಂದೇ ಕುಂದಗೋಳ ಪಟ್ಟಣದ ರೈತಾಪಿ ಟ್ರ್ಯಾಕ್ಟರ್ ಹಾಗೂ ಇತರೆ ವಾಹನ ಸವಾರರಿಗೆ ಪೆಟ್ರೋಲ್, ಡೀಸೆಲ್ ಸಿಗದಂತಹ ಪರಿಸ್ಥಿತಿಯ ಬಿಸಿ ಬಲವಾಗಿ ತಟ್ಟಿದೆ.
ಕುಂದಗೋಳ ಪಟ್ಟಣದಲ್ಲಿರುವ ಪೆಟ್ರೋಲ್ ಬಂಕ್‌ಗಳಲ್ಲಿ ಒಂದು ಪೆಟ್ರೋಲ್ ಡೀಸೆಲ್ ಇಲ್ಲದೆ ಈ ರೀತಿ ಕ್ಲೋಸ್ ಆಗಿದ್ರೆ, ಇನ್ನೊಂದು ಬಂಕ್ ಡಿಸೇಲ್ ಇಲ್ಲದೆ ಪೆಟ್ರೋಲ್ ಮಾತ್ರ ಪೂರೈಕೆ ಮಾಡ್ತಾ ಇದ್ದು ಬೈಕ್ ಸವಾರರು ಪೆಟ್ರೋಲ್‌ಗಾಗಿ ಸರದಿ ಸಾಲಿನಲ್ಲಿ ನಿಂತಿದ್ದಾರೆ.
ಇನ್ನೂ ಮುಂಗಾರು ಕೃಷಿ ಕೆಲಸದಲ್ಲಿ ತೊಡಗಿದ ರೈತರು ಹೊಲದಲ್ಲಿ ಟ್ರ್ಯಾಕ್ಟರ್ ನಿಲ್ಲಿಸಿ ಡಿಸೇಲ್ ತರಲು ಖಾಲಿ ಕ್ಯಾನ್ ಹಿಡಿದು ಕುಂದಗೋಳಕ್ಕೆ ಬಂದ್ರೇ ಬಂಕ್ ಖಾಲಿ ಖಾಲಿ ಇರೋದನ್ನು ಕಂಡು ಏನು ಹೇಳಿದ್ರೂ ಅಂತ ಕೇಳಿ.
ಕೆಲ ರೈತರು ತಮ್ಮ ಕೃಷಿ ಚಟುವಟಿಕೆ ಹರಗುವ ಕೆಲಸ ನಡೆಸಲು ಕುಂದಗೋಳ ಬಿಟ್ಟು ಹುಬ್ಬಳ್ಳಿ ಸೇರಿದಂತೆ ವಿವಿಧೆಡೆ ಬೈಕ್ ತೆಗೆದುಕೊಂಡು ಹೋಗಿ ಡಿಸೇಲ್ ತಂದು ಪುನಃ ಟ್ರ್ಯಾಕ್ಟರ್ ಮೂಲಕ ಕೃಷಿ ಕಾಯಕ ಕೈಗೊಂಡಿದ್ದಾರೆ. ಒಟ್ಟಾರೆ ಸರಕು ಸೇವೆ ಮುಖ್ಯವಾಗಿ ಮುಂಗಾರು ಬಿತ್ತನೆ ಸಮಯದಲ್ಲೇ ಪೆಟ್ರೋಲ್, ಡೀಸೆಲ್ ಇಲ್ಲಾ ಎಂಬ ತಾಪತ್ರಯ ಸಮಸ್ಯೆಯಾಗಿ ಪರಿಣಮಿಸಿದೆ.
-ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
30/05/2022 09:14 pm