ಅಳ್ನಾವರ:ಮುಂಗಾರು ಮಳೆ ಆರಂಭವಾದ ಬೆನ್ನಲ್ಲೇ ಅಳ್ನಾವರ ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಬಿತ್ತನೆ ಬೀಜಗಳನ್ನ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ ಎಂದು ಅಳ್ನಾವರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸುನಂದಾ ಸಿತೋಳೆ ಅವರು ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದರು.
ಸಮಯಕ್ಕೆ ಸರಿಯಾಗಿ ಮಳೆ ಯಾದದ್ದರಿಂದ ರೈತರಿಗೆ ಅತೀ ಅವಶ್ಯಕವಾದ ಬಿತ್ತನೆ ಬೀಜಗಳು ರೈತ ಸಂಪರ್ಕ ಕೇಂದ್ರದಲ್ಲಿ ಉಪಯುಕ್ತ ವಿದ್ದು,ನಿನ್ನೆ ಇಂದ ವಿತರಿಸಲಾಗುತ್ತಿದೆ.ರೈತರು ಇದರ ಸದುಪಯೋಗ ಪಡೆದುಕೊಳ್ಳ ಬೇಕು ಅಂದು ಅವರು ಹೇಳಿದರು.
ಅಳ್ನಾವರ ರೈತ ಸಂಪರ್ಕ ಕೇಂದ್ರದಲ್ಲಿ ಮೂರು ತರಹದ ಭತ್ತ(ಇಂಟನ್,ಜಯಾ,ಅಭಿಲಾಶ)2825 ಕೆ.ಜಿ.ತೊಗರಿ 480 ಕೆ.ಜಿ.ಸೋಯಾಬಿನ್ 510 ಕೆ.ಜಿ.ಗೋವಿನಜೋಳ 10600 ಕೆ.ಜಿ ಸದ್ಯ ಲಭ್ಯವಿದ್ದು,ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ರೈತರಲ್ಲಿ ವಿನಂತಿಸಲಾಗಿದೆ ಎಂದು ತಿಳಿಸಿದರು.
Kshetra Samachara
24/05/2022 03:18 pm