ಹುಬ್ಬಳ್ಳಿ: ಹುಬ್ಬಳ್ಳಿ ಮಾರ್ಗವಾಗಿ ಹಳ್ಯಾಳ ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯದಲ್ಲಿ ನಡೆಯುತ್ತಿರುವ ರೈಲ್ವೆ ಬ್ರಿಡ್ಜ್ ನಿರ್ಮಾಣ ಕಾಮಗಾರಿ ಕಾರಣ ಅಕ್ಕಪಕ್ಕದ ರೈತರ ಹೊಲದಲ್ಲಿ ಪರ್ಯಾಯ ರಸ್ತೆ ವ್ಯವಸ್ಥೆ ಮಾಡಲಾಗಿದೆ.
ಈ ಹೊಲದಲ್ಲಿ ತಾತ್ಕಾಲಿಕ ರಸ್ತೆ ಕಲ್ಪಿಸುವಾಗ ರೈತರಿಗೆ ವಾರ್ಷಿಕ 50 ಸಾವಿರ ಹಣ ನೀಡಲು ಒಪ್ಪಿದ ಗುತ್ತಿಗೆದಾರ ಎರೆಡು ವರ್ಷ ಕಾಮಗಾರಿ ನಡೆಸಿ ಇತ್ತ ರೈತರಿಗೆ ಹಣ ನೀಡದೆ ಕಾಲ್ಕಿತ್ತಿದ್ದು ಪುನಃ ಕಾಮಗಾರಿ ಹೊಸ ಗುತ್ತಿಗೆದಾರರ ಕೈ ಸೇರಿದೆ ಈಗ ಹೊಸ ಗುತ್ತಿಗೆದಾರರ ಹಳೆಯ ಹಣಕ್ಕೂ ನಮಗೂ ಸಂಬಂಧವಿಲ್ಲ ಎನ್ನುವುದನ್ನು ವಿರೋಧಿಸಿ ಹಳ್ಯಾಳ ರೈತರು ಬ್ರಿಡ್ಜ್ ಕಾಮಗಾರಿ ಸ್ಥಳಕ್ಕೆ ರೈಲ್ವೆ ಅಧಿಕಾರಿಗಳನ್ನು ಕರೆಸಿ ರಸ್ತೆ ಬಂದ್ ಮಾಡುವ ಎಚ್ಚರಿಕೆ ನೀಡಿ ಮಾತುಕತೆ ನಡೆಸಿದ್ದಾರೆ.
ರೈತರು ನಮಗೆ ಸಂದಾಯವಾಗಬೇಕಾದ ಹಣ ಕೊಡಿ, ಬ್ರಿಡ್ಜ್ ನಿರ್ಮಾಣ ಕಾಮಗಾರಿ ಆರಂಭಿಸಿ ನಮ್ಮ ಹೊಲದಲ್ಲಿ ಪರ್ಯಾಯ ರಸ್ತೆ ನೀಡುತ್ತೇವೆ ಎನ್ನುವ ಉತ್ತಮ ಅಭಿಪ್ರಾಯಕ್ಕೆ ರೈಲ್ವೆ ಇಲಾಖೆಯ ಉನ್ನತದರ್ಜೆ ಅಧಿಕಾರಿಗಳು ಸಾಥ್ ನೀಡಬೇಕಾಗಿದೆ.
Kshetra Samachara
11/05/2022 10:27 pm