ಹುಬ್ಬಳ್ಳಿ: ಸ್ವಚ್ಛತೆ ಕಾಪಾಡಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಎಂದು ಅಭಿಯಾನ ಕೂಡ ಮಾಡಿದ್ದರು. ಅದು ಕೇವಲ ನಾಮಕಾವಸ್ಥೆ ಮಾತ್ರ ಆಗಿದೆ. ಈ ನಗರದ ಪ್ರದೇಶವನ್ನು ನೋಡಿದ್ರ ಸ್ವಚ್ಛ ಭಾರತ ಮಾಯವಾಗಿದೆ.
ಹೀಗೆ ರಸ್ತೆ ಮಧ್ಯದಲ್ಲೇ ಕಸದ ರಾಶಿ. ಒಂದು ಕಡೆ ಮಕ್ಕಳ ಆಟ ಇಷ್ಟೆಲ್ಲ ದೃಶ್ಯಗಳು ಕಂಡು ಬಂದಿದ್ದು, ವಾಣಿಜ್ಯ ನಗರಿಯ ದೇಶಪಾಂಡೆ ನಗರದ ಬ್ಯಾಹಟ್ಟಿ ಪ್ಲಾಟ್ ದಲ್ಲಿ. ಮೊದಲೇ ಸೋಂಕುಗಳು ಹೆಚ್ಚಾಗುತ್ತಿವೆ. ಅಂತದರಲ್ಲಿ ಇಲ್ಲಿ ಕಸದ ವಿಲೇವಾರಿ ಮಾಡದೆ ಕಾರಣ ರಸ್ತೆ ತುಂಬ ಕಸದ ರಾಶಿ ಹರಡಿದೆ. ಇಲ್ಲಿನ ನಿವಾಸಿಗಳು ಈ ರಸ್ತೆಯಲ್ಲಿ ಮನೆಗೆ ಹೋಗಬೇಕಾದರೆ ಮೂಗು ಮುಚ್ಚಿಕೊಂಡು ಹೋಗುವಂತಹ ಪರಿಸ್ಥಿತಿ ಎದುರಾಗಿದೆ. ಈ ಸಮಸ್ಯೆ ಬಗ್ಗೆ ಪಾಲಿಕೆದವರಿಗೆ ಕರೆ ಮಾಡಿದರು ಯಾರು ಕೂಡ ಕ್ಯಾರೆ ಎನ್ನುತ್ತಿಲ್ಲವಂತೆ. ಕೂಡಲೇ ಪಾಲಿಕೆ ಈ ಸ್ಥಳದಲ್ಲಿದ್ದ ಕಸವನ್ನು ದಿನಂಪ್ರತಿ ವಿಲೇವಾರಿ ಮಾಡಬೇಕಾಗಿದೆ.
Kshetra Samachara
11/05/2022 10:52 am