ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: 29 ದಿನಗಳಿಂದ ಸಂಬಳಕ್ಕಾಗಿ ಟಾಟಾ ಮಾರ್ಕೊಪೋಲ್ ಕಾರ್ಮಿಕರ: ಅನಿರ್ದಿಷ್ಟಾವಧಿ ಧರಣಿ

ಧಾರವಾಡ: ಟಾಟಾ ಮಾರ್ಕೊಪೋಲ್ ಕಾರ್ಮಿಕರಿಗೆ ಹೊಸ ವೇತನ ಒಪ್ಪಂದದಂತೆ ಬಾಕಿ ಉಳಿದಿರುವ ವೇತನವನ್ನು ನೀಡುವಂತೆ ಆಗ್ರಹಿಸಿ, ಧಾರವಾಡದ ಡಿಸಿ ಕಚೇರಿ ಮುಂದಗಡೆ 29 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ಕಾರ್ಮಿಕರು ನಡೆಸುತ್ತಿದ್ದರು, ಅಧಿಕಾರಿಗಳಿಂದ ಇನ್ನುವರಿಗೂ ಸ್ಪಂದನೆ ದೊರತಿಲ್ಲ.

ಜಿಲ್ಲಾಧಿಕಾರಿ ಕಚೇರಿ ಎದುಗಡೆ ನೂರಾರು ಸಂಖ್ಯೆಯಲ್ಲಿ ಟಾಟಾ ಮಾರ್ಕೋಪೋಲ್ ಕಾರ್ಮಿಕರು ಬಾಕಿ ವೇತನ ಹಾಗೂ ವಜಾಗೊಂಡ ಕಾರ್ಮಿಕರನ್ನು ಮರು ಸೇರ್ಪಡಿಸುವಂತೆ ಆಗ್ರಹಿಸಿ, ಧರಣಿ ನಡೆಸುತ್ತಿದ್ದಾರೆ. ಆದರೆ, ಧರಣಿ ತಿಂಗಳು ಕಳೆತ್ತಾ ಬಂದ್ರು ಸಂಬಂಧಿಸಿದ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಸಿಗದಂತೆ ಆಗದೆ. ಬರುವ ದಿನಗಳಲ್ಲಿ ಕಾರ್ಮಿಕರ ದಿನಾಚರಣೆ ರಂದು ದೊಡ್ಡ ಪ್ರಮಾಣದ ಹೋರಾಟಕ್ಕೆ ಸಜ್ಜಾಗಿದ್ದವೆ ಎಂದು ಧರಣಿ ಹೋರಾಟಗಾರ ಕೆಜಿ ಗುನ್ನಾಳ ಹೇಳಿದ್ದಾರೆ.

ಕಾರ್ಮಿಕರ ಕ್ರಾಂತಿಕಾರಿ ಸಂಘ ಹಾಗೂ ಟಾಟಾ ಆಡಳಿತ ಮಂಡಳಿ ಕಂಪನಿ ಆಂತರಿಕ ತಿಕ್ಕಾಟದಿಂದ ಕಂಪನಿ ಲಾಕೌಟ್ ಕೂಡ ಮಾಡಿತ್ತು. ಇದರಿಂದ ಸಾವಿರಾರು ಕುಟುಂಬಗಳು ಬೀದಿಗೆ ಬಂದಿದ್ದು ಈಗ ಇತಿಹಾಸ. ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳ ಸತತ ಪ್ರಯತ್ನದಿಂದ ಟಾಟಾ ಮಾರ್ಕೊಪೋಲ್ ಜೊತೆಗಿನ ಸಂಧಾನ ಯಶಸ್ವಿಯಾಗಿತ್ತು. ಆದರೆ ಇಂದು ತಮ್ಮ ಬೇಡಿಕೆಗಳಿಗೆ ಆಡಳಿತ ಮಂಡಳಿ ಇಲ್ಲಿಯವರೆಗೂ ಈಡೇರಿಸಿಲ್ಲ ಎಂದು ಆರೋಪಿಸಿ, ಅನಿರ್ದಿಷ್ಟಾವಧಿ ಧರಣಿಗೆ ಮುಂದಾಗಿದ್ದಾರೆ.

Edited By : Manjunath H D
Kshetra Samachara

Kshetra Samachara

24/04/2022 03:47 pm

Cinque Terre

19.52 K

Cinque Terre

0

ಸಂಬಂಧಿತ ಸುದ್ದಿ