ಕುಂದಗೋಳ : ಲೋಕೋಪಯೋಗಿ ಇಲಾಖೆ ಅಧಿಕಾರಿಗಳೇ ಒಂದು ರಸ್ತೆ ಅಭಿವೃದ್ಧಿ ವಿಷಯದಲ್ಲಿ ನೀವು ತಾಳಿದ ಮೌನ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದ್ದು, ರಸ್ತೆ ಕಳಪೆ ಪ್ಯಾಚ್ ವರ್ಕ್ ಕಾಮಗಾರಿ ನೋಡಿ ಜನತೆ ಇಲಾಖೆಗೆ ಛೀಮಾರಿ ಹಾಕುವ ಪ್ರಸಂಗ ಏರ್ಪಟ್ಟಿದೆ
ಕಳೆದ ಮೂರು ವರ್ಷಗಳಿಂದ ಹಾಳಾದ ಕುಂದಗೋಳ ಕಡಪಟ್ಟಿ ಮಾರ್ಗದ ಕೇವಲ ಆರು ಕಿಲೋ ಮೀಟರ್ ರಸ್ತೆ ಅಭಿವೃದ್ಧಿ ನೀವು ಮರೆತ ಹಿನ್ನೆಲೆಯಲ್ಲಿ ರಸ್ತೆ ತುಂಬಾ ಕಲ್ಲು, ನೀರು, ತಗ್ಗು ಗಂಡಿಗಳೇ ಬಿದ್ದಿದ್ದು ವಾಹನ ಸಂಚಾರಕ್ಕೆ ಮಾರಕವಾಗಿ ಪರಿಣಮಿಸಿ ಎಷ್ಟೋ ಅಪಘಾತ ಸಂಭವಿಸಿವೆ.
ಈ ಸಂಬಂಧ ಕಡಪಟ್ಟಿ ಅಲ್ಲಾಪೂರ ಗ್ರಾಮಸ್ಥರು ಈ ಹಿಂದೆ ನಡೆದ ಕುಂದಗೋಳ ಕಡಪಟ್ಟಿ ರಸ್ತೆಯ ಪ್ಲಡ್ ಡ್ಯಾಮೇಜ್ ವರ್ಕ್ ಕಳಪೆ ಕಾಮಗಾರಿ ಕೈಗನ್ನಡಿ ಎಂಬಂತೆ ರಸ್ತೆಗೆ ಸುರಿದ ಡಾಂಬರ್ ಕಲ್ಲುಗಳನ್ನು ಕೈಯಿಂದ ಹರಡಿ ನೆಲಕ್ಕೆ ಸುರಿದು ನಿಮ್ಮ ಕಾರ್ಯ ವೈಖರಿ ಗುಣಮಟ್ಟ ತಿಳಿಸಿದ್ದಾರೆ.
ನಿತ್ಯ ಕುಂದಗೋಳ ಹುಬ್ಬಳ್ಳಿಗೆ ಆಸ್ಪತ್ರೆ, ಕೃಷಿ ಚಟುವಟಿಕೆ, ಸಂತೆ, ಪ್ಯಾಟಿ ಮುಖ್ಯವಾಗಿ ಕಚೇರಿ ಕೆಲಸಗಳಿಗೆ ಓಡಾಡುವ ರಸ್ತೆ. ಇದೀಗ ಹಾಳು ಕಸ ಸುಟ್ಟು ಹಾಕುವ, ಕಟ್ಟಡಗಳ ತ್ಯಾಜ್ಯ ವಿಸರ್ಜಿಸುವ ರೀತಿ ಹಾಳಾಗಿದ್ದನ್ನು ನೋಡುತ್ತ ಮೂರು ವರ್ಷ ಸಹಿಸಿಕೊಂಡ ಅಲ್ಲಾಪೂರ ಕಡಪಟ್ಟಿ ಜನತೆ ಲೋಕೋಪಯೋಗಿ ಇಲಾಖೆಗೆ ಮುತ್ತಿಗೆ ಹಾಕುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
22/04/2022 04:09 pm