ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
ಕುಂದಗೋಳ : ತಾಲೂಕಿನ ಎಲ್ಲೆಡೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಜಲ ಜೀವನ್ ಮಿಷನ್ ಕಾಮಗಾರಿಯ ಅಧಿಕಾರಿಗಳ ಆಸಕ್ತಿ, ಕೆರೆಗಳ ಸಂರಕ್ಷಣೆಗೆ ಇಲ್ಲವೇ ಇಲ್ಲಾ ನೋಡಿ.
ಕುಂದಗೋಳ ತಾಲೂಕಿನ 26 ಗ್ರಾಮ ಪಂಚಾಯಿತಿ ಸೇರಿ ಒಟ್ಟು 102 ಕೆರೆಗಳು ಇದ್ದು, ಈ ಕೆರೆಗಳ ನಿರ್ವಹಣೆ ಆಯಾ ಗ್ರಾ.ಪಂ. ಆಡಳಿತಕ್ಕೆ ಒಳಪಟ್ಟಿದ್ರೂ ಅವುಗಳ ಸುರಕ್ಷತೆ ಮರೆಯಾಗಿ, ಕೆರೆ ಹಾಗೂ ಕೆರೆ ಸುತ್ತಲಿನ ಜಾಗ, ಕುಡುಕರ ಅಡ್ಡೆ, ಜಾನುವಾರು ವಾಸಸ್ಥಾನ, ಜೊತೆ ಖಾಸಗಿ ಜನರ ಉಪಯೋಗಕ್ಕೆ ಮೀಸಲಾಗಿವೆ.
ತಾ.ಪಂ ಸಮಗ್ರ ಕೆರೆ ಅಭಿವೃದ್ಧಿ ಯೋಜನೆಯಲ್ಲಿ ಆಸಕ್ತರು ದೂರ ಉಳಿದು, ಇನ್ನುಳಿದ ಕೆಲವೇ ಕೆಲ ಗ್ರಾಮಗಳಲ್ಲಿ ಈ ಯೋಜನೆ ಇದೆ. ಈಗಾಗಲೇ ಜಾರಿಯಲ್ಲಿರುವ ಝಣ ಝಣ ಕಾಂಚಾಣದ ಜೆಜೆಎಂ ಕೆಲಸದಲ್ಲಿ, ಕೆರೆಗಳ ಅಭಿವೃದ್ಧಿ ಮಂಗ ಮಾಯವಾಗಿದೆ.
ಮುಖ್ಯವಾಗಿ ಕೆರೆ ಹೂಳೆತ್ತುವ ಕೆಲಸ, ಕೆರೆ ಸುತ್ತ ಬೆಳೆದ ಕಸ ನಿರ್ವಹಣೆ, ಬತ್ತಿಹೋದ ಕೆರೆಗಳ ಪುನಶ್ಚೇತನ, ಕೆರೆಗೆ ನೀರು ಬರುವ ಹಳ್ಳಗಳ ದುರಸ್ತಿ, ಕೆರೆ ಸುತ್ತಲಿನ ಮೆಟ್ಟಿಲುಗಳು ದುರಸ್ತಿ, ಕೆರೆ ನೀರಿನ ಗುಣಮಟ್ಟ ಪರಿಶೀಲನೆ, ಕಾರ್ಯಗಳನ್ನು ಆಯಾ ಗ್ರಾ.ಪಂ. ಮೂಲೆ ಗುಂಪು ಮಾಡಿದ್ದು, ಹಳ್ಳಿಗರು ಸಹ ಕೆರೆ ಉಳಿವಿಗಾಗಿ ಚಕಾರ ಎತ್ತದೆ ಗಪ್ ಚುಪ್ ಆಗಿದ್ದಾರೆ.
ಒಟ್ಟಾರೆ ಮುಂದೊಂದು ದಿನ ಕೆರೆಗಳು ಕಾಣದಾಗುವ ಮೊದಲೇ ಹಳ್ಳಿಗರೇ ಎಚ್ಚರವಾಗಿರಿ.
Kshetra Samachara
15/03/2022 09:31 pm