ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: "ಶ್ರದ್ಧಾಂಜಲಿ'' ಶವ ವಾಹನಕ್ಕೇ ಶ್ರದ್ಧಾಂಜಲಿ, ಪೊಲೀಸರ ಪರದಾಟ

ವರದಿ : ಈರಣ್ಣ ವಾಲಿಕಾರ

ಹುಬ್ಬಳ್ಳಿ: ಸಕಾಲದಲ್ಲಿ ಶವವಾಹನ ಸಿಗದೇ ಅನಾಥ ಶವಗಳ ಸಾಗಾಟಕ್ಕೆ ಪೊಲೀಸರು ಪರದಾಡುವಂತಾಗಿದೆ.

ನಗರದ ಪಾರ್ಕ್, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಆಶ್ರಯ ಪಡೆದಿರುವ ಅನಾಥರು, ನಿರ್ಗತಿಕರು ಅನಾರೋಗ್ಯದಿಂದ ಮರಣ ಹೊಂದಿದಾಗ ಆ ಶವಗಳನ್ನು ಕಿಮ್ಸ್ ಶವಗಾರಕ್ಕೆ ರವಾನಿಸಬೇಕಿದೆ.

ಕಾರಣ, ಶವ ಸಾಗಿಸಲೆಂದೇ ಮಹಾನಗರ ಪಾಲಿಕೆಯಲ್ಲಿ ಶ್ರದ್ಧಾಂಜಲಿ ವಾಹನ ಇದೆ. ಆದ್ರೆ ಆ ಶ್ರದ್ಧಾಂಜಲಿ ವಾಹನ ತಾನೇ ಶ್ರದ್ಧಾಂಜಲಿ ಸಲ್ಲಿಸಿಕೊಂಡು ಅದೆಷ್ಟೋ ದಿನಗಳು ಕಳೆದಿವೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸರ ಪರವಾಗಿ ಪಾಲಿಕೆ ಆಯುಕ್ತರ ಮುಂದೆ ಧ್ವನಿಯಾಗಿತ್ತು. ಆ ಧ್ವನಿಗೆ ಇದೀಗ ಪಾಲಿಕೆ ಆಯುಕ್ತರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಈ ರೀತಿ ಅವಳಿನಗರದಲ್ಲಿ ಅನಾಥ ಶವಗಳು ಕಂಡು ಬಂದಲ್ಲಿ, ನನಗೆ ಕರೆ ಮಾಡಿ ಮಾಹಿತಿ ಕೊಡಿ ಎಂದು ಖಾಕಿ ಕೆಲಸಕ್ಕೆ ಕೈಜೋಡಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

02/03/2022 01:41 pm

Cinque Terre

62.27 K

Cinque Terre

7

ಸಂಬಂಧಿತ ಸುದ್ದಿ