ಅಳ್ನಾವರ: ಇದು ಎರಡು ತಾಲೂಕುಗಳನ್ನು ಒಂದೆಡೆ ಸೇರಿಸುವ ಸಂಗಮ ರಸ್ತೆ.ಆ ಸಂಗಮದ ರೂವಾರಿ ಈ ಸೇತುವೆ.ಆದರೆ ಇಲ್ಲಿ ಅದೆಷ್ಟೋ ವರುಷಗಳಿಂದ ಮೂಲಭೂತ ಸೌಲಭ್ಯ ಇಲ್ಲದೆ,ಅಭಿವೃದ್ಧಿ ಕಾಣದೆ ಈ ಗ್ರಾಮ ಹಾಗೂ ಈ ಗ್ರಾಮಕ್ಕೆ ಕಲ್ಪಿಸುವ ಸೇತುವೆ,ರಸ್ತೆ ಎಲ್ಲವೂ ಬಿಕೋ ಎನ್ನುತ್ತಿವೆ.
ಖಾನಾಪುರ ತಾಲೂಕಿನ ಕಟ್ಟ ಕಡೆಯ ಹಳ್ಳಿ ಪೂರ್ ಎಂಬ ಗ್ರಾಮ ಅತ್ಯಂತ ಹಿಂದುಳಿದ ಗ್ರಾಮಗಳಲ್ಲಿ ಒಂದಾಗಿದೆ.ಇಲ್ಲಿ ರಸ್ತೆಗಳೇ ಇಲ್ಲದೇ ಶಾಲಾ ವಿದ್ಯಾರ್ಥಿಗಳು ಸುಮಾರು 10 ಕಿ. ಮೀ ಪ್ರತಿ ದಿನ ನಡೆದುಕೊಂಡೇ ಅಳ್ನಾವರದ ಶಾಲೆಗೆ ಹೋಗಬೇಕು.ಶಾಲಾ ಮಕ್ಕಳಿಗೆ ಹಾಗೂ ಗ್ರಾಮಸ್ಥರಿಗೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಕೂಡ ಇಲ್ಲ.
ಇದು ಬೆಳಗಾವಿ ಜಿಲ್ಲೆ ಹಾಗೂ ಧಾರವಾಡ ಜಿಲ್ಲೆ ಎರಡು ಜಿಲ್ಲೆಗೆ ಹೊಂದಿಕೊಂಡು ಇರುವುದರಿಂದ ಕಾರಣ ಗಳನ್ನು ನೀಡಿ ರಾಜಕೀಯ ನಾಯಕರು ಜಾರಿಕೊಳ್ಳುತ್ತಿದ್ದಾರೆ.ಸಬೂಬು ನೀಡುವುದನ್ನು ಇನ್ನಾದರೂ ಬಿಟ್ಟು ಸೇತುವೆ ನಿರ್ಮಾಣ ಮಾಡಿ,ಆ ಸೇತುವೆಗೆ ತಡೆ ಗೋಡೆಗಳನ್ನ ನಿರ್ಮಿಸಿ ಮುಂದಾಗುವ ಅನಾಹುತಗಳನ್ನು ತಪ್ಪಿಸಬೇಕು.ಪೂರ್ ಗ್ರಾಮಕ್ಕೆ ರಸ್ತೆ ನಿರ್ಮಾಣ ಮಾಡಬೇಕೆಂಬುದು ಗ್ರಾಮಸ್ಥರ ಕಳ ಕಳಿಕೆಯ ವಿನಂತಿಯಾಗಿದೆ.
-ಮಹಾಂತೇಶ ಪಠಾಣಿ ಪಬ್ಲಿಕ್ ನೆಕ್ಸ್ಟ್ ಅಳ್ನಾವರ.
Kshetra Samachara
24/02/2022 03:58 pm