ಹುಬ್ಬಳ್ಳಿ: ಒಂದ್ ರೀತಿ ಈ ರೋಡ್ No mans Land ಥರವೇ ಇದೆ. ಈ ರಸ್ತೆ ಹುಬ್ಬಳ್ಳಿ ತಾಲೂಕಿಗೆ ಬರುತ್ತದೆ. ವಿಧಾನಸಭಾ ಕ್ಷೇತ್ರ ನವಲಗುಂದ ಆಗಿದೆ. ಆದರೂ ಈ ರಸ್ತೆ ದುರಸ್ತಿ ಭಾಗ್ಯ ಕಂಡೇ ಇಲ್ಲ.ಕಂಡರೂ ಅದು ಶಾಶ್ವತ ಅಲ್ಲವೇ ಅಲ್ಲ.ಬನ್ನಿ ಹೇಳ್ತೀವಿ.
ಹುಬ್ಬಳ್ಳಿಯಿಂದ ನೀವು ಕೋಳಿವಾಡ ಕ್ರಾಸ್ ವರೆಗೂ ಅತ್ಯದ್ಭುತ ರೋಡ್ ಅಲ್ಲಿಯೇ ಸಾಗಬಹುದು. ಅಪ್ಪಿ-ತಪ್ಪಿ ನೀವು ಕೋಳಿವಾಡ ಕ್ರಾಸ್ ನಿಂದ ಶಿರಹಟ್ಟಿಗೆ ಬರೋಕೆ ಟರ್ನ್ ತೆಗೆದಿಕೊಂಡ್ರೊ, ಅಲ್ಲಿಗೆ ಮುಗಿತು. ನಿಮ್ಮ ನಿರ್ಧಾರ ರಾಂಗ್ ಟರ್ನ್ ಆಗಿ ಬಿಡುತ್ತದೆ.
ಹೌದು ಕೋಳಿವಾಡ ರಸ್ತೆ ಒಂಚೂರು ಚೆನ್ನಾಗಿಲ್ಲ. ಹಾಳಾಗಿ ಹೋಗಿದೆ. ಈ ರಸ್ತೆ ಹುಬ್ಬಳ್ಳಿ ತಾಲೂಕಿಗೆ ಬಂದ್ರು ದುರಸ್ತಿ ಕಂಡಿಲ್ಲ. ನವಲಗುಂದ ವಿಧಾನಸಭಾ ಕ್ಷೇತ್ರ ಇದಾಗಿದ್ದರೂ ಏನೂ ಪ್ರಯೋಜನ ಇಲ್ಲವೇ ಇಲ್ಲ. ಆಗಾಗ ರಿಪೇರಿ ಆಗುತ್ತದೆ. ಮತ್ತೆ ಮತ್ತೆ ಕೆಟ್ಟು ಹೋಗುತ್ತದೆ ಹೀಗೆ.
ಇದೇ ರೋಡ್ ಕೆಲವು ಕಡೆಗೆ ಚೆನ್ನಾಗಿದೆ. ಇನ್ನೂ ಕೆಲವು ಕಡೆಗೆ ಹಾಳಾಗಿ ಹೋಗಿದೆ. ಇನ್ನೂ ಕೆಲವು ಕಡೆಗೆ ದುರಸ್ತಿ ಕಾರ್ಯ ನಡೆಯುತ್ತಿದೆ. ಕೋಳಿವಾಡ ಕ್ರಾಸ್ ನಿಂದ ಕೋಳಿವಾಡ ವರೆಗಿನ 10 ಕಿಲೋ ಮೀಟರ್ ರಸ್ತೆ ಹೆಚ್ಚು ಕಡಿಮೆ ಅದ್ಧ್ವಾನ ಆಗಿದೆ.
Kshetra Samachara
26/01/2022 08:43 pm