ನವಲಗುಂದ : ವಾ... ಪುರಸಭೆ ವತಿಯಿಂದ ಎಷ್ಟು ಅಚ್ಚುಕಟ್ಟಾದ ಸಾರ್ವಜನಿಕ ಮೂತ್ರಾಲಯವನ್ನು ನಿರ್ಮಿಸಿದ್ದಾರಲ್ವಾ, ಆದ್ರೆ ಏನ್ ಮಾಡ್ತೀರಿ ಜನರು ಮಾತ್ರ ಅದನ್ನ ಉಪಯೋಗಿಸದೆ ಇದ್ರೆ, ನಿರ್ಮಿಸಿಯಾದ್ರೂ ಏನು ಉಪಯೋಗ ಅನಿಸದೆ ಇರೋದಿಲ್ಲ. ಇದನ್ನೆಲ್ಲಾ ನಾವು ಹೇಳೋಕು ಒಂದು ಕಾರಣ ಇದೆ.
ಹೌದು ಈ ಸಾರ್ವಜನಿಕ ಮೂತ್ರಾಲಯ ಇರೋದು ನವಲಗುಂದ ಪಟ್ಟಣದ ಲಿಂಗರಾಜ ವೃತ್ತದಿಂದ ಹೃದಯ ಭಾಗದಲ್ಲಿರುವ ಗಾಂಧಿ ಮಾರುಕಟ್ಟೆಗೆ ತೆರಳುವ ರಸ್ತೆಯಲ್ಲಿ. ಮೂತ್ರಾಲಯ ಇದ್ರೂ ಕೂಡ ಕೆಲವು ಜನರು ಅದನ್ನು ಉಪಯೋಗಿಸದೆ ಅದರ ಎದುರೇ ಬಯಲು ಮೂತ್ರ ಮಾಡುತ್ತಿದ್ದಾರೆ. ಇದು ಮಾರುಕಟ್ಟೆ ಸ್ಥಳವಾದ್ದರಿಂದ ಇಲ್ಲಿನ ಅಂಗಡಿಗಳಿಗೆ ಬರುವ ಮಹಿಳೆಯರು, ಮಕ್ಕಳಿಗೆ ತೊಂದರೆ ಉಂಟುಮಾಡುತ್ತಿದೆ. ಮೂತ್ರಾಲಯ ಇಲ್ಲದೇ ಇದ್ರೆ ಸಾರ್ವಜನಿಕರೆ ಅಧಿಕಾರಿಗಳಿಗೆ ಒತ್ತಾಯಿಸಿ, ಮೂತ್ರಾಲಯವನ್ನು ನಿರ್ಮಿಸಿಕೊಳ್ಳಬೇಕ್ಕಿತ್ತು. ಆದ್ರೆ ಈಗ ಅಧಿಕಾರಿಗಳು ನಿರ್ಮಿಸಿ ಕೊಟ್ಟರು ಇದನ್ನು ಸಾರ್ವಜನಿಕರು ಉಪಯೋಗಿಸದೆ ಇರೋದು ನಿಜಕ್ಕೂ ಬೇಸರದ ಸಂಗತಿ. ಈ ಬಗ್ಗೆ ಸಾರ್ವಜನಿಕರೆ ಎಚ್ಚೆತ್ತುಕೊಂಡು ನಡೆಯಬೇಕಿದೆ.
-ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ
Kshetra Samachara
20/01/2022 11:38 am