ಹುಬ್ಬಳ್ಳಿ: ಅದು ರಾಜ್ಯದ ಎರಡನೇ ದೊಡ್ಡ ನಗರ. ಆ ನಗರದ ರಸ್ತೆಯಲ್ಲಿ ಬಿದ್ದ ತಗ್ಗು ಗುಂಡಿಗಳಿಂದ ವಾಹನ ಸವಾರರು ಹೈರಾಣಾಗಿದ್ದರು. ಆದರೆ ಆ ರಸ್ತೆಗಳ ತಗ್ಗು ಗುಂಡಿ ಮುಚ್ಚುವುದಕ್ಕೆ ಆ ಮಹಾನಗರ ಪಾಲಿಕೆ ಕೋಟಿ ಕೋಟಿ ಹಣ ಸುರಿದರೂ, ಆ ರಸ್ತೆಗಳಿಗೆ ಮಾತ್ರ ಶಾಶ್ವತ ಪರಿಹಾರ ಸಿಕ್ಕಿಲ್ಲ. ಏನದು ತಗ್ಗು ಗುಂಡಿಗಳ ಯಡವಟ್ಟು ಅಂತಾ ಹೇಳ್ತೀವಿ ಈ ಸ್ಟೋರಿ ನೋಡಿ.
ಹುಬ್ಬಳ್ಳಿ-ಧಾರವಾಡ ಅವಳಿನಗರದ ರಸ್ತೆಯಲ್ಲಿ ಸಂಚಾರ ಮಾಡುವುದೆ ಒಂದು ಸಾಹಸದ ಕೆಲಸ. ವಾಹನ ಸವಾರರು ಜೀವ ಭಯದಲ್ಲೇ ಸಂಚಾರ ಮಾಡುತ್ತಿದ್ದಾರೆ. ರಸ್ತೆಯಲ್ಲಿ ಬಿದ್ದಿರುವ ಗುಂಡಿಯಿಂದಾಗಿ ನಗರದ ರಸ್ತೆಗಳೆ ಕಣ್ಮರೆಯಾಗಿವೆ. ಅಲ್ಲದೆ ಇತ್ತೀಚೆಗೆ ಸುರಿದ ನಿರಂತರ ಮಳೆಯಿಂದಾಗಿ ಅವಳಿ ನಗರದಾದ್ಯಂತ ನಿರ್ಮಾಣವಾಗಿರುವ ತಗ್ಗು ಗುಂಡಿಗಳನ್ನು ಮುಚ್ಚುವುದಕೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಬರೋಬ್ಬರು 3.57 ಕೋಟಿ ಟೆಂಡರ್ ನೀಡಿದೆ. ಅದರಲ್ಲಿ ಈಗಾಗಲೇ ಸುಮಾರು 2 ಕೋಟಿ ಹಣ ತಗ್ಗು ಗುಂಡಿ ಮುಚ್ಚೋಕೆ ವ್ಯಯ ಮಾಡಿದ್ದು, ಆ ರಸ್ತೆಗಳು ಮಾತ್ರ ಯಾವುದೇ ದುರಸ್ತಿ ಕಂಡಿಲ್ಲ. ಹೀಗಾಗಿ ಕೇವಲ ರಸ್ತೆಯಲ್ಲಿ ನಿರ್ಮಾಣವಾಗಿರೋ ತಗ್ಗು ಗುಂಡಿಗಳನ್ನು ಮುಚ್ಚುವುದಕೆ ಅಂತ ಮೂರುವರೆ ಕೋಟಿ ರೂಪಾಯಿ ಹಣ ವ್ಯಯಿಸಲು ಮುಂದಾಗಿರುವ ಪಾಲಿಕೆ ಅಧಿಕಾರಿಗಳ ನಡೆ ಅವಳಿ ನಗರದ ಜನರಿಗೆ ಅನುಮಾನ ಮೂಡಿಸುವಂತೆ ಮಾಡಿದೆ.
ಇನ್ನೂ ಪ್ರಮುಖವಾಗಿ ಎಚ್.ಡಿ.ಎಂ.ಸಿ ಇಡಿ ಅವಳ ನಗರದಾದ್ಯಂತ ನಿರ್ಮಾಣವಾಗಿರುವ ತಗ್ಗು ಗುಂಡಿಗಳ ದುರಸ್ತಿಗೆ ಚಿಂತನೆ ನಡೆಸಿತ್ತು. ಅದರಂತೆಯೇ ನಗರದಾದ್ಯಂತ 56 ಸಾವಿರ ಚದರ ಪ್ರದೇಶ ಅಂದರೆ ಬರೋಬ್ಬರಿ 463 ಕಿ.ಮೀ ಪ್ರದೇಶದಲ್ಲಿ ನಿರ್ಮಾಣವಾಗಿರೋ ತಗ್ಗು ಗುಂಡಿಗಳನ್ನು ಮುಚ್ಚೋಕೆ ಈಗಾಗಲೇ ಬರೋಬ್ಬರಿ ಎರಡು ಕೋಟಿ ರೂಪಾಯಿ ಖರ್ಚು ಮಾಡಿದೆ. ಇನ್ನೂ 1.57 ಕೋಟಿ ರೂಪಾಯಿ ಖರ್ಚು ಮಾಡಲು ಕಾರ್ಯ ನಡೆಸುತ್ತಿದ್ದು, ಪಾಲಿಕೆ ಅಧಿಕಾರಿಗಳ ಈ ನಡೆ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಇಷ್ಟೊಂದು ಹಣ ಕೇವಲ ತಗ್ಗು ಗುಂಡಿ ಮುಚ್ಚುವುದಕ್ಕೆ ಬಳಸುವ ಬದಲಿಗೆ ರಸ್ತೆಗಳನ್ನೇ ನಿರ್ಮಾಣ ಮಾಡಬಹುದಿತ್ತು.
ಒಟ್ಟಾರೆ ಕೇವಲ ತಗ್ಗು ಗುಂಡಿ ಮುಚ್ಚುವ ನೆಪದಲ್ಲಿ ಪಾಲಿಕೆ ಅಧಿಕಾರಿಗಳು ಕೋಟ್ಯಾಂತರ ರೂಪಾಯಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದ್ದು, ಇನ್ನಾದರೂ ಈ ರೀತಿ ಕೋಟಿ ಕೋಟಿ ಹಣ ಪೋಲು ಮಾಡುವ ಬದಲು ಉತ್ತಮ ಗುಣಮಟ್ಟದ ರಸ್ತೆಗಳನ್ನ ನಿರ್ಮಾಣ ಮಾಡಲು ಪಾಲಿಕೆ ಅಧಿಕಾರಿಗಳು ಮುಂದಾಗಬೇಕಿದೆ.
Kshetra Samachara
15/01/2022 02:06 pm