ಕುಂದಗೋಳ : ನವಲಗುಂದದಿಂದ ಬನವಾಸಿವರೆಗೆ ಹೋಗುವ ರಾಜ್ಯ ಹೆದ್ದಾರಿಯನ್ನು ನಂ.137 ಗುಡೇನಕಟ್ಟಿ ಮೇಲೆ ಹಾಯ್ದು ಹೋಗುವಂತೆ ಸರ್ಕಾರ ಹೊರಡಿಸಿದ ನಕಾಶೆ ಪ್ರಕಾರ ರಸ್ತೆ ಅಭಿವೃದ್ಧಿ ಪಡಿಸುವಂತೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರಿಗೆ ಗುಡೇನಕಟ್ಟಿ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಈಗಾಗಲೇ ಸರ್ಕಾರದ ನಕಾಶೆ ಪ್ರಕಾಶ್ ರಸ್ತೆ ಗುಡೇನಕಟ್ಟಿಯಿಂದ ಕುಂದಗೋಳ ತಲುಪಬೇಕು, ಆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಕ್ರಮ ಕೈಗೊಂಡು ರಸ್ತೆ ನಿರ್ಮಾಣಕ್ಕೆ ಮುಂದಾಗುವಂತೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸಕ್ರಪ್ಪ ಕಮ್ಮಾರ್, ಸಮಾಜ ಸೇವಕ ಬಸವರಾಜ ಯೋಗಪ್ಪನವರ, ಇತರರು ಉಪಸ್ಥಿತರಿದ್ದರು.
Kshetra Samachara
11/01/2022 11:52 am