ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಪಿಡ್ಬ್ಲೂಡಿ ಇಲಾಖೆ ಕಳಪೆ ಕಾಮಗಾರಿಗೆ ಕೈಗನ್ನಡಿ ಈ ಕಲ್ಲುಗಳು

ವೀಕ್ಷಕರ ವರದಿ

ಕುಂದಗೋಳ : ಕುಂದಗೋಳ ಪಟ್ಟಣದಿಂದ ಹಿರೇನರ್ತಿಗೆ ಸಂಪರ್ಕ ಕಲ್ಪಿಸುವ ರಸ್ತೆ ಪಕ್ಕದಲ್ಲಿ ಲೋಕೋಪಯೋಗಿ ಇಲಾಖೆ ನಿರ್ಮಿಸಿದ ರಸ್ತೆ ಪಕ್ಕದ ಕಂಬಗಳ ಕಳಪೆ ಕಾಮಗಾರಿಯನ್ನು ಆ ಕಂಬಗಳೇ ವಿವರಿಸುತ್ತಿವೆ.

ಹೌದು ! ಕುಂದಗೋಳ ಪಟ್ಟಣದಿಂದ ಹಿರೇನರ್ತಿಗೆ ಸಂಪರ್ಕ ಕಲ್ಪಿಸುವ ರಸ್ತೆ ಪಕ್ಕದಲ್ಲಿ ಲೋಕೋಪಯೋಗಿ ಇಲಾಖೆ ನಿರ್ಮಿಸಿದ ಕಂಬಗಳು ನಿರ್ಮಿಸಿದ ಮಾರನೇ ದಿನವೇ ಕಿತ್ತು ಬೀಳುತ್ತಿವೆ. ಇನ್ನೂ ಕಂಬದ ಸುತ್ತಲೂ ಕಡಿ ಸಿಮೇಂಟ್ ಸರಿಯಾದ ಪ್ರಮಾಣದಲ್ಲಿ ಹಾಕಿ ಭದ್ರ ಪಡಿಸಿದೆ ಕೈ ಬಿಟ್ಟ ಕಾರಣ ಈಗಾಗಲೇ ಸಿಮೇಂಟ್ ಕಡಿ ಬೇರ್ಪಟ್ಟು ಕೆಲ ಕಂಬಗಳು ನೆಲಕ್ಕೆ ಬಿದ್ದಿವೆ.

ಈ ಕಳಪೆ ಕಾಮಗಾರಿ ವಿಡಿಯೋಗಳನ್ನು ರಸ್ತೆ ಸಂಚಾರಿ ಬಸಾಪೂರ ಗ್ರಾಮದ ಮೆಹಬೂಬ ಮುಲ್ಲಾನವರ ಪಬ್ಲಿಕ್ ನೆಕ್ಸ್ಟ್'ಗೆ ಕಳುಹಿಸಿ ಈ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಹಾಗೂ ತಾಲೂಕು ಆಡಳಿತ ಗಮನಿಸುವಂತೆ ಕೋರಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

23/12/2021 02:48 pm

Cinque Terre

84.06 K

Cinque Terre

3

ಸಂಬಂಧಿತ ಸುದ್ದಿ