ಕುಂದಗೋಳ : ಪಟ್ಟಣದ ನೈರ್ಮಲ್ಯ ಕಾಪಾಡಲು ಕಸದ ವಿಂಗಡಣೆ ಹಾಗೂ ಕಸದಿಂದ ಗೊಬ್ಬರ ತಯಾರಿಸುವ ಕಾರ್ಯಕ್ಕೆ ಸನ್ನದ್ಧರಾಗಿ ಬರೋಬ್ಬರಿ 226 ಲಕ್ಷ ವೆಚ್ಚದ ಘನ ತ್ಯಾಜ್ಯ ನಿರ್ವಹಣೆ ಘಟಕವನ್ನೂ ಸ್ಥಾಪಿಸಿ ಅಗತ್ಯ ಯಂತ್ರ ಪೂರೈಸುವಂತೆ ಕುಂದಗೋಳ ಪಟ್ಟಣ ಪಂಚಾಯಿತಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ.
ನಿತ್ಯ 19 ವಾರ್ಡ್'ಗಳನ್ನು ಒಳಗೊಂಡ ಕುಂದಗೋಳ ಪಟ್ಟಣದ ಮನೆ ಹಾಗೂ ಬೀದಿ ಕಸವನ್ನು ನಿರ್ವಹಣೆ ಮಾಡಿ ಅದರಿಂದ ಅಗತ್ಯ ಉಪಯುಕ್ತ ಗೊಬ್ಬರ ತಯಾರಿಸುವ ಪ್ರಯೋಗ ನಡೆಸಿದ ಕುಂದಗೋಳ ಪಟ್ಟಣ ಪಂಚಾಯಿತಿ, ಈಗಾಗಲೇ ಒಂದು ಮಾನ್ಸೂನ್ ಗೂಡೌನ ಹಾಗೂ ಒಂದು ತೆರೆದ ಗೂಡೌನ್ ಸ್ಥಾಪಿಸಿ ಪಟ್ಟಣದಲ್ಲಿ ಸಂಗ್ರಹವಾಗುವ ಹಸಿ ಮತ್ತು ವಣ ಕಸದಿಂದ ಗೊಬ್ಬರ ತಯಾರಿಸಿ, ಪ್ಲಾಸ್ಟಿಕ್ ತ್ಯಾಜ್ಯವನ್ನು ವಿಲೇವಾರಿ ಮಾಡಲು ಯಂತ್ರ ಬರವಿಕೆಗಾಗಿ ಕಾಯ್ದಿದೆ.
ಘನ ತ್ಯಾಜ್ಯ ವಸ್ತುಗಳ ವಿಸ್ತ್ರತ ಯೋಜನೆಯಲ್ಲಿ ಪ್ಲಾಸ್ಟಿಕ್ ಬೇರಿಂಗ್ ಮಷಿನ್, ಸ್ಕ್ರಿನಿಂಗ್ ಮಷಿನ್, ಬೇರಿಂಗ್ ಮಷಿನ್ ಬಂದ ನಂತರದಲ್ಲಿ ಕಸ ವಿಲೇವಾರಿ ಅನುಕೂಲವಾದ್ರೇ, ಕಸದ ಡಬ್ಬಗಳು ಪಟ್ಟಣ ಪಂಚಾಯಿತಿ ವತಿಯಿಂದ ಮುಂದಿನ ದಿನಗಳಲ್ಲಿ ಮನೆ ಮನೆ ತಲುಪಲಿವೆ.
ಒಟ್ಟಾರೆ 2021ರಲ್ಲಿ ನೂತನ ಯೋಜನೆ ಮೂಲಕ ಪಟ್ಟಣದ ಸ್ವಚ್ಚತೆಗೆ ಪಟ್ಟಣ ಪಂಚಾಯಿತಿ ದಿಟ್ಟ ಹೆಜ್ಜೆ ಇಟ್ಟಿದೆ.
-ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
15/12/2021 06:07 pm