ಹುಬ್ಬಳ್ಳಿ: ಹಂದಿ ಹುಬ್ಬಳ್ಳಿಯ ಗೋಕುಲ ರಸ್ತೆದಾಗ ಇರುವ ಜವಳಿ ಗಾರ್ಡನ್ ನೋಡಿದ್ರ ನೀವು ಹೌಹಾರೋದು ಗ್ಯಾರಂಟಿ ನೋಡ್ರಿ…ಇಲ್ಲಿನ ರಸ್ತೆ.. ಸ್ವಚ್ಚತೆ.. ಥು..ಥು..ಥೂ..ಥು..
ನಾಚಿಗೆ ಆಗಬೇಕ ರೀ ನಮ್ಮ ಪಾಲಿಕೆಯವರಿಗೆ ಹೇಳಾಕ ಸ್ಮಾರ್ಟ್ ಸೀಟಿ ಅದೇನೋ ಅಂತಾರಲ್ಲಾ ಒಂಥರಾ ಹತ್ತಿ ಹಣ್ಣ ಇದ್ದಂಗ ನೋಡ್ರಿ ನಮ್ಮ ಸ್ಮಾರ್ಟ್ ಸಿಟಿ ಅಂದ್ರ ನೋಡಾಕ ಮ್ಯಾಲ ಬಾಳ ಚಂದ ಒಳಗ ಬರೀ ಹುಳಕ
ಈ ಜವಳಿ ಗಾರ್ಡನ್ಯಾಗ ವಾಸ ಮಾಡು ಮಂದಿ ಪಾಡು ಹೇಳಂಗಿಲ್ಲ ರೀ…ಮಕ್ಕಳು ಮರಿ ಅಂತೂ ಹೊರಗ ಬರಂಗಿಲ್ಲ ಗುಂಪ ಗುಂಪ ಹಂದಿ ಹಂಗ ಓಡ್ಯಾತಾವ ಯಾವಾಗ ಯಾರ ಮ್ಯಾಲ ಅಟ್ಯಾಕ್ ಮಾಡತ್ತಾವೋ ದೇವರಿಗೆ ಗೊತ್ತ..
ಇನ್ನಾ ಈ ಏರಿಯಾದಾಗ ಚರಂಡಿ ಅನ್ನೊದಂತೂ ಇಲ್ಲಇಲ್ಲಾ ಹಿಂಗಾಗಿ ನೀರೇಲ್ಲಾ ರಸ್ತೆ ಮ್ಯಾಲ ಹರದ ಅಲ್ಲಿ ರಸ್ತೆ ಇತ್ತೇನು ಅನ್ನುಹಂಗ ಆಗೇತಿ.. ಇನ್ನಾ ಇಲ್ಲಿ ಮಂದಿ ಈ ದುಸ್ಥಿತಿಯಿಂದ ಬ್ಯಾಸತ್ತ ಪಾಲಿಕೆಗೆ ಕಂಪ್ಲೆಟ್ ಕೊಟ್ರು ಯಾರು ಕ್ಯಾರ ಅನವಲ್ರು, ಕಾರ್ಪೋರೇಟರ್ ಅಂತೂ ಓಟ್ ಕೇಳಾಕ ಬಂದಾವ ಮತ್ತ ಈಕಡೆ ಬಂದೆ ಇಲ್ಲಾ.. ಅನ್ನಾಕತ್ತಾರ ಇಲ್ಲಿನ ಮಂದಿ… ನೋಡ್ರ ಪಾ ಕೈ ಕಾಲ ಬಿದ್ದ ಅಧಿಕಾರ ಹಿಡಿದಿರಿ ಮಂದಿದ ಸ್ವಲ್ಪ ಸಮಸ್ಯೆ ಕೇಳ್ರಿ…
ಇದು ವಿಕ್ಷಕ ವರದಿ
Kshetra Samachara
09/12/2021 04:31 pm