ಹುಬ್ಬಳ್ಳಿ: ಅದು ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಶ್ರೀರಾಮನ ಹೆಸರನ್ನು ಇಟ್ಟಿರುವ ನಗರ. ಆದರೆ ಆ ನಗರದ ವ್ಯವಸ್ಥೆ ನೋಡಿದರೇ ಇದು ನಿಜಕ್ಕೂ ಶ್ರೀರಾಮನಗರ ಎಂದು ಅನಿಸುವುದೇ ಇಲ್ಲ. ಇಲ್ಲಿನ ಜನರು ದಿನವೂ ಕೂಡ ನರಕಯಾತನೆ ಅನುಭವಿಸುತ್ತಿದ್ದಾರೆ.
ಹೌದು... ವಾಣಿಜ್ಯನಗರಿ ಹುಬ್ಬಳ್ಳಿಯ ಶ್ರೀರಾಮನಗರದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಅಲ್ಲದೇ ರಸ್ತೆ ಕೂಡ ಸರಿಯಾಗಿ ಇಲ್ಲದೇ ಇರುವುದರಿಂದ ಮಳೆಯ ನೀರು ರಸ್ತೆಯಲ್ಲಿ ನಿಲ್ಲುತ್ತದೆ. ಅಷ್ಟೇ ಅಲ್ಲದೇ ಮನೆಯ ದ್ರವ ತ್ಯಾಜ್ಯ ಕೂಡ ಸಮರ್ಪಕವಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲದೇ ರಸ್ತೆಯಲ್ಲಿಯೇ ಕೊಳೆತು ನಾರುತ್ತದೆ. ಇದರಿಂದ ಇಲ್ಲಿನ ಜನರು ಸಂಚಾರ ಮಾಡಲು ದಿನವೂ ಪರದಾಡುವಂತಾಗಿದೆ.
ಇನ್ನೂ ಮಳೆ ಬಂದರೇ ಕೈಯಲ್ಲಿ ಜೀವ ಹಿಡಿದುಕೊಂಡು ನಡೆಯಬೇಕಿದೆ. ಅದೆಷ್ಟೋ ಜನರು ಧೈರ್ಯ ಮಾಡಿ ಮುಂದೆ ಹೋದರೆ ರಸ್ತೆಯಲ್ಲಿಯೇ ಬಿದ್ದು ಕೈ, ಕಾಲು ಗಾಯಮಾಡಿಕೊಂಡು ಬರುವಂತ ಸ್ಥಿತಿ ನಿರ್ಮಾಣವಾಗಿದೆ.
ಹೆಸರಿಗೆ ಮಾತ್ರ ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಹೊಂದಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಇಲ್ಲಿನ ಸಮಸ್ಯೆ ಕಾಣಿಸುತ್ತಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಜನರ ಸಮಸ್ಯೆ ಬಗೆಹರಿಸುವ ಕಾರ್ಯವನ್ನು ಮಾಡಬೇಕಿದೆ.
Kshetra Samachara
01/12/2021 07:08 pm