ಕುಂದಗೋಳ : ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಶಿರೂರು ಬ್ರಿಡ್ಜ್ ನೆಲಕ್ಕೆ ಅಪ್ಪಳಿಸಿದ ವಿಚಾರವಾಗಿ ಇಂದಿಗೂ ಸಹ ಸಾರಿಗೆ ಬಸ್ ಸಂಚಾರಕ್ಕೆ ಅನುಮತಿ ಅಡೆತಡೆಯಾಗೆ ಇದೆ. ಇದರ ನಡುವೆ ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಶಿರೂರು ಬ್ರಿಡ್ಜ್ ಮೇಲೆ ಉಸುಕು ತುಂಬಿದ ಲಾರಿಗಳು ಯಾರ ಭಯ ಇಲ್ಲದೆ ಸಂಚಾರ ನಡೆಸಿವೆ.
ಕಳೆದ ಹಲವಾರು ದಿನಗಳಿಂದ ಉಸುಕು ತುಂಬಿದ ಲಾರಿಗಳು ಸಂಚಾರ ನಡೆಸಿದ್ರೂ ಇಂದಿಗೂ ಸಹ ಯಾವ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಪಬ್ಲಿಕ್ ನೆಕ್ಸ್ಟ್'ಗೆ ಸತತವಾಗಿ ಈ ತರಹ ಲಾರಿ ಸಂಚರಿಸುವ ವಿಡಿಯೋಗಳನ್ನು ಸಾರ್ವಜನಿಕರು ಕಳುಹಿಸಿ ಶಿರೂರು ಬ್ರಿಡ್ಜ್ ಮೇಲೆ ಈ ರೀತಿ ಭಾರಿ ಪ್ರಮಾಣದ ವಾಹನ ಓಡಾಟ ನಡೆಸಿದ್ರೇ ಐದು ಕೋಟಿ ವೆಚ್ಚದ ಶಿರೂರು ಬ್ರಿಡ್ಜ್ ಕಾಮಗಾರಿ ಮುಗಿಯೋದು ಯಾವಾಗ ಎನ್ನುತ್ತಿದ್ದಾರೆ ?
ಈ ಬಗ್ಗೆ ಜನಪ್ರತಿನಿಧಿಗಳು ಜಿಲ್ಲಾಡಳಿತ ಮೌನವಾಗಿರುವುದು ಗಮನಿಸಿದ್ರೇ ಎಲ್ಲೋ ಸಂಶಯದ ಹೊಗೆ ಆಡುತ್ತಿದೆ.
Kshetra Samachara
26/11/2021 08:40 pm